Recent Posts

Monday, January 20, 2025
ಸುದ್ದಿ

ಫೇಸ್‌ಬುಕ್‌ನಲ್ಲಿ ಖಾದರ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಅಭಿಮಾನಿ ಬಳಗದಿಂದ ದೂರು – ಕಹಳೆ ನ್ಯೂಸ್

ಮಂಗಳೂರು: ಕಸಾಯಿಖಾನೆ ವಿವಾದದ ಬಳಿಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕುರಿತು ಫೇಸ್ ಬುಕ್‌ನಲ್ಲಿ ಚಿತ್ರ ವಿರೂಪಗೊಳಿಸಿ ಅವಹೇಳನಕಾರಿಯಾಗಿ ಬರೆಯಲಾಗಿದ್ದು , ತಪ್ಪಿತಸ್ಥರನ್ನು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ.

‘ಹನಿ ಹಿಂದೂಸ್ತಾನಿ ಮಂಗಳೂರು ಹಿಂದು’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಸಚಿವ ಯು.ಟಿ.ಖಾದರ್ ಅವರನ್ನು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿ, ಸಚಿವರ ಮಾನಹಾನಿ ಗೈಯಲಾಗಿದೆ ಎಂದು ಆರೋಪಿಸಿ, ಯು.ಟಿ.ಖಾದರ್ ಅಭಿಮಾನಿ ಬಳಗದ ಸದಸ್ಯ ಅಶ್ರಫ್ ಮೋನು ಬೋಳಿಯಾರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಫೇಸ್‌ಬುಕ್ ಖಾತೆಯಲ್ಲಿ ಸಚಿವ ಯು.ಟಿ.ಖಾದರ್ ಭಾವಚಿತ್ರಗಳನ್ನು ವಿರೂಪಗೊಳಿಸಿ, ಅವಾಚ್ಯ ಪದಗಳನ್ನು ಬಳಸಿ ಮಾನಹಾನಿಕರ ವರದಿಗಳನ್ನು ಪ್ರಸರಿಸಿದ್ದು, ಲಕ್ಷಾಂತರ ಯು.ಟಿ.ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಮಾತ್ರವಲ್ಲ, ಪ್ರಸ್ತುತ ಫೇಸ್‌ಬುಕ್ ಖಾತೆಯಲ್ಲಿ ಕೋಮು ವಿದ್ವೇಷವನ್ನುಂಟು ಮಾಡುವ ಪೋಸ್ಟ್ಗಳನ್ನೂ ಹಾಕಲಾಗಿದೆ.

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ರಮೇಶ್ ಶೆಟ್ಟಿ ಬೋಳಿಯಾರು, ಹರ್ಷಾದ್ ವರ್ಕಾಡಿ, ಇಸ್ಮಾಯೀಲ್ ಕರ್ವೇಲು, ಲತೀಫ್ ಮೈಕಾಲ ಮತ್ತಿತರರು ಉಪಸ್ಥಿತರಿದ್ದರು.