MLA ಟಿಕೆಟ್ ಕೊಡಿಸೋದಾಗಿ ವಂಚನೆ ಕೇಸ್ : ನಿರೀಕ್ಷಣಾ ಜಾಮೀನಿಗಾಗಿ ‘ಅಭಿನವ ಹಾಲಶ್ರೀ’ ಕೋರ್ಟ್ ಗೆ ಅರ್ಜಿ – ಕಹಳೆ ನ್ಯೂಸ್
ಬೆಂಗಳೂರು: MLA ಟಿಕೆಟ್ ಕೊಡಿಸುವುದಾಗಿ 5 ಕೋಟಿ ವಂಚನೆ ಪ್ರಕರಣದಲ್ಲಿ ಈಗಾಗಲೇ ಆರೋಪಿ ಚೈತ್ರಾ ಕುಂದಾಪುರ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವಂತ ಅಭಿನಯ ಹಾಲಶ್ರೀ ಮಾತ್ರ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೂ ಬಲೆ ಬೀಸಲಾಗಿದೆ.
ಈ ಬೆನ್ನಲ್ಲೇ, ನಿರೀಕ್ಷಣಾ ಜಾಮೀನಿಗಾಗಿ ಅಭಿನವ ಹಾಲಶ್ರೀ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ ಉದ್ಯಮಿಯೊಬ್ಬರಿಗೆ 5 ಕೋಟಿ ವಂಚಿಸಿದಂತ ಆರೋಪ ಚೈತ್ರಾ ಕುಂದಾಪುರ, ಅಭಿನಯ ಹಾಲಶ್ರೀ ಸೇರಿದಂತೆ ಹಲವರ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ಉದ್ಯಮಿ ದಾಖಲಿಸಿದ್ದಂತ ದೂರಿನ ಹಿನ್ನಲೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಈ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವಿಚಾರಣೆಗಾಗಿ ವರ್ಗಾವಣೆ ಮಾಡಲಾಗಿತ್ತು.
ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿ, ಕೆಲ ದಿನಗಳ ಹಿಂದಷ್ಟೇ ಆರೋಪಿ ಚೈತ್ರಾ ಕುಂದಾಪುರ ಸೇರಿದಂತೆ ಮೂವರನ್ನು ಬಂಧಿಸಿದ್ದರು. ನಿನ್ನೆ ವಿಚಾರಣೆಗೆ ಹಾಜರಾಗೋ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ್ದಂತ ಚೈತ್ರಾ ಕುಂದಾಪುರ, ಹಾಲಶ್ರೀ ಸಿಗಲಿ ಈ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಗಲಿದೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದರು.
ಈ ಹೇಳಿಕೆಯ ಬೆನ್ನಲ್ಲೇ ಅಭಿನಯ ಹಾಲಶ್ರೀ ಬಂಧನದ ಭೀತಿಯಿಂದ ನಿನ್ನೆ ಸಂಜೆಯೇ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರ ಜಾಮೀನು ಅರ್ಜಿಯ ವಿಚಾರಣೆ ನಾಳೆ ಕೋರ್ಟ್ ನಡೆಸೋ ನಿರೀಕ್ಷೆಯಿದೆ. ಆ ಬಳಿಕ ಜೈಲೋ, ಜಾಮೀನೋ ತಿಳಿಯಲಿದೆ.