ಕೋಡಿಂಬಾಡಿ ಗ್ರಾಪಂ; ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂವಿಧಾನದಿAದಾಗಿ ಇಂದು ಭಾರತ ಬಲಿಷ್ಟ ರಾಷ್ಟ್ರವಾಗಿದೆ: ಜಯಪ್ರಕಾಶ್ ಬದಿನಾರ್ – ಕಹಳೆ ನ್ಯೂಸ್
ಪುತ್ತೂರು: ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ, ದಾದಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಿAದಾಗಿ ಇಂದು ಭಾರತ ಬಲಿಷ್ಟ ರಾಷ್ಟ್ರವಾಗಿ ಉಳಿದಿದೆ ಎಂದು ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಹೇಳಿದರು.
ಅವರು ಕೋಡಿಂಬಾಡಿ ಗ್ರಾಪಂ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರುಭುತ್ವ ದಿನಾನಚರಣೆಯಲ್ಲಿ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಇಂದು ದೇಶದಲ್ಲಿ ಕಟ್ಟಕಡೇಯ ವ್ಯಕ್ತಿಗೆ ನ್ಯಾಯ, ಅಧಿಕಾರ ದೊರೆಯಲು ಸಂವಿಧಾನ ಕಾರಣವಾಗಿದೆ. ಭಾರತದಪ್ರಜಾಪ್ರಭುತ್ವ ವ್ಯವಸೆದಿಂದು ವಿಶ್ವಕ್ಕೆ ಮಾದರಿಯಾಗಿದೆ. ತುಳಿಯಲ್ಪಟ್ಟ ಸಮುದಾದ ಇಂದು ಸಮಾಜದಲ್ಲಿ ಉನ್ನತ ಸ್ಥಾನ ಮಾನದಲ್ಲಿರುವಂತಾಗಲು ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆಯೇ ಕಾರಣವಾಗಿದೆ ಎಂಬುದನ್ನು ನಾವು ಪ್ರತೀಯೊಬ್ಬರು ಅರಿತುಕೊಳ್ಳಬೇಕು. ಸ್ವಾತಂತ್ರ‍್ಯ ಪೂರ್ವದಲ್ಲಿ ದೇಶದಲ್ಲಿ ನೆಲಯೂರಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿದ್ದೇ ನಮ್ಮ ಸಂವಿಧಾನ. ದೇಶದಲ್ಲಿ ಪ್ರತೀಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ನೀಡುವ ಮೂಲಕ ತಮಗಿಷ್ಟವಾದ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಅವಕಾಶ ನೀಡಿರುವುದು ನಮ್ಮ ಸಂವಿಧಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ, ಸದಸ್ಯರುಗಳಾಗ ರಾಮಣ್ಣ ಗೌಡ ಗುಂಡಲೆ, ಜಗನ್ನಾಥ ಶೆಟ್ಟಿ ನಡುಮನೆ. ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ಮೋಹಿ , ವಿಶ್ವನಾಥ ಕೃಷ್ಣಗಿರಿ, ಪುಷ್ಪ ಬೆಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.ಗ್ರಾಪಂ ಪಿಡಿಒ ವಿಲ್ಫ್ರೆಡ್ ಸ್ವಾಗತಿಸಿದರು. ಕಾರ್ಯದರ್ಶಿ ಅನ್ನುವಂದಿಸಿದರು. ಸಿಬಂದಿಗಳಾದ ಲೀಲಾವತಿ, ಕುಸುಮ , ರೀತಾ,ಕಾವ್ಯ , ಸುರೇಶ, ಸುರೇಶ ಕಿನ್ನಿತಪಾಲಿಕೆ ಸಹಕರಿಸಿದರು.