ಸೆ.19 ಗಣೇಶ್ ಚತುರ್ಥಿಗೆ ಸಾರ್ವತ್ರ್ರಿಕ ರಜೆಯನ್ನು ಘೋಷಿಸಬೇಕಾಗಿ ವಿಶ್ವ ಹಿಂದೂ ಪರಿಷದ್ ಆಗ್ರಹ – ಕಹಳೆ ನ್ಯೂಸ್
ಮಂಗಳೂರು : ಇಡೀ ವಿಶ್ವದ ಹಿಂದುಗಳ ಅತ್ಯಂತ ಪ್ರಮುಖ ಹಬ್ಬ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಸೆ.19 ರಂದು ನೀಡಬೇಕಾಗಿ, ಈ ವರ್ಷದ ಸರಕಾರಿ ರಜೆಗಳ ಪಟ್ಟಿಯಲ್ಲಿ ಸೆ. 18 ರಂದು ರಜೆ ಘೋಷಿಸಿದ್ದು, ಗಣೇಶ ಚತುರ್ಥಿ ಹಬ್ಬ ಸೆ. 19 ರಂದು ಆಚರಿಸಲಿರುವ ಕಾರಣ ಅದೇ ದಿನ ರಜೆಯನ್ನು ನೀಡಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿಗಳಾದ ಶರಣ್ ಪಂಪುವೆಲ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುμÉೂೀತ್ತಮ, ಜಿಲ್ಲಾಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕ್ ನವೀನ ಮೂಡುಶೆಡ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.