Recent Posts

Monday, January 27, 2025
ಸುದ್ದಿ

ಸೆ.19ರಿಂದ 20ರೆವರೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರು ಪಂಜ ವತಿಯಿಂದ ನಡೆಯಲಿರುವ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ – ಕಹಳೆ ನ್ಯೂಸ್

ಪುತ್ತೂರು : ಸೆ.19ರಿಂದ 20ರೆವರೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರು ಪಂಜ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ನಡೆಯಲಿದೆ.

ಬೆಳಿಗ್ಗೆ ಶ್ರೀ ದೇವರ ವಿಗ್ರಹ ಪ್ರತಿಷ್ಠೆ ಬಳಿಕ ಗಣಪತಿ ಹವನ, ಭಜನಾ ಕಾರ್ಯಕ್ರಮ, ಸ್ಥಳಿಯರಿಗೆ ವಿವಿಧ ಆಟೋಟ ಸ್ಫರ್ಧೆಗಳು ನಡೆಯಲಿದ್ದು, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೆ.20ರ ಬೆಳಿಗ್ಗೆ ಭಜನೆ ಹಾಗೂ ಶ್ರೀದೇವರಿಗೆ ವಿಶೇಷ ಪೂಜೆಯ ಬಳಿಕ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಂಜೆ ವಿಶೇಷ ಆಕರ್ಷಣೆಯಾಗಿ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ ಶ್ರೀ ದೇವಿ ಬೀಟ್ಸ್ ಅವರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನದೊಂದಿಗೆ ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದೆ.