ಸೆ.19ರಿಂದ 21ರವರೆಗೆ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರು ಇದರ ವತಿಯಿಂದ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವ – ಕಹಳೆ ನ್ಯೂಸ್
ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರು ಇದರ ಸಾರ್ವಜನಿಕ ಗಣೇಶೋತ್ಸವ ನಡೆಯಲ್ಲಿದ್ದು. ದಿನಾಂಕ 19ರಂದು ಮಂಗಳವಾರ ಬೆಳಗ್ಗೆ ದೇವರಿಗೆ ವಿಶೇಷ ಪ್ರಾರ್ಥನೆಯ ಬಳಿಕ 10 ಗಂಟೆಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠೆ, ಗಣಪತಿ ಹವನ ಹಾಗೂ ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
19ರಂದು ಗಣೇಶೋತ್ಸವದ ಪ್ರಯುಕ್ತ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ಮಧ್ಯಾಹ್ನ 2.30ರಿಂದ ಗಣಪತಿಯ ಚಿತ್ರ ಬಿಡಿಸುವ ಸ್ಪರ್ಧೆ, ಸಂಜೆ ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗಾಗಿ ಮತ್ತು ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ ನಡೆಯಲಿದೆ.
ಬುಧವಾರ ಬೆಳಿಗ್ಗೆ ಗಣಪತಿ ಹವನ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು. ಹಾಗೂ ಸಂಜೆ ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಇದೇ ದಿನ ಸಾರ್ವಜನಿಕ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೇಸರಿ ಫ್ರೆಂಡ್ಸ್, ಸಂತೋಷ್‌ನಗರ ಇದರ ಆಶ್ರಯದಲ್ಲಿ ದಶಕದ ಸಂಭ್ರಮ 10ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಕೆದಂಬಾಡಿ ಕೃಷಿಪತ್ತಿನ ಇಲಾಖೆ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಹಿಷಮರ್ದಿನೀ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರು ಇದರ ಅಧ್ಯಕ್ಷರಾದ ಶ್ರೀ ಶಶಿಧರ ರಾವ್ ಬೊಳಿಕ್ಕಳ ಇವರು ವಹಿಸಲಿದ್ದಾರೆ. ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ, ಕನ್‍ಸ್ಟ್ರಕ್ಷನ್ ಅಧ್ಯಕ್ಷರಾದ ಶ್ರೀ ರವೀಂದ್ರ ರೈ ಅವರು ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ KMF ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರು, SCDCC ಬ್ಯಾಂಕ್ ನಿರ್ದೇಶಕರಾದ ಶ್ರೀ ಎಸ್.ಬಿ. ಜಯರಾಮ ರೈ ಬಳಜ್ಜ ಹಾಗೂ ಕೆಯ್ಯೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶೀ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷರಾದ ಶ್ರೀಮತಿ ಸುಮಿತ್ರ ದಿವಾಕರ ಪೂಜಾರಿ ಪಲ್ಲತ್ತಡ್ಕ, ನಿವೃತ್ತ BSNL ಅಧಿಕಾರಿ ಶ್ರೀ ಬಾಲಕೃಷ್ಣ ರೈ ಮಾಡಾವು, ಕೆಯ್ಯೂರು ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀ ಪದ್ಮನಾಭ ಪೂಜಾರಿ ಪಲ್ಲತ್ತಡ್ಕ, ಕೆಯ್ಯೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯಂತಿ ಎಸ್.ಭಂಡಾರಿ ಮಾಡಾವು ಭಾಗವಹಿಸಲ್ಲಿದ್ದಾರೆ.
ಸಂಜೆ ಶ್ರೀ ದುರ್ಗಾ ಕೆಯ್ಯೂರು ನೃತ್ಯ ತಂಡದ ವತಿಯಿಂದ ವೈವಿಧ್ಯಮಯ ನೃತ್ಯ ರೂಪಕ ನಡೆಯಲಿದೆ. ರಾತ್ರಿ ಗಂಟೆ 9ರಿಂದ ಮ್ಯೂಸಿಕಲ್ ನೈಟ್ ವಿತ್ ಯೂತ್ ಮೆಲೋಡೀಸ್ ಕುಡ್ಲ ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಸುಷ್ಮಾ ಜೆ. ಶೆಟ್ಟಿ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಣೇಶೋತ್ಸವಕ್ಕೆ ವಿಶೇಷ ಮೆರುಗು ತುಂಬಲಿದೆ.
21ರ ಗುರುವಾರ ಗಣಪತಿ ಹವನ ಹಾಗೂ ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆದ ಬಳಿಕ ಸಂಜೆ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಹಾಗೂ ಗೌರಿ ಹೊಳೆ ಸಂಗಮದಲ್ಲಿ ಮಹಾಗಣಪತಿಯ ವಿಗ್ರಹ ಜಲಸ್ಧಂಭನಗೊಳ್ಳಲಿದೆ.