Friday, January 24, 2025
ಸುದ್ದಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ : ಸೆ.19ರಿಂದ 21ರವರೆಗೆ 40ನೇ ವರ್ಷದ ಶ್ರೀಗಣೇಶೋತ್ಸವ : ಭರದ ಸಿದ್ದತೆ – ಕಹಳೆ ನ್ಯೂಸ್

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ವತಿಯಿಂದ, ಸೆ.19 ರಿಂದ 21ರವರೆಗೆ ಅಶ್ವತ್ಥಕಟ್ಟೆ ವಠಾರದಲ್ಲಿ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.


ಕೋಡಿಂಬಾಡಿ ಸಾರ್ವಜನಿಕ ಗಣೇಶೋತ್ಸವದ ಆಚರಣೆಯ ಹಿನ್ನಲೆಯಲ್ಲಿ ಸಂಭ್ರಮ ಮನೆಮಾಡಿದ್ದು, ಇದರ ನಡುವೆ ಸಭಾಂಗಣ ಮತ್ತು ಪಾಕಶಾಲೆ ಸಜ್ಜುಗೊಳಿಸುವ ಕಾರ್ಯ, ಶ್ರಮದಾನ ಹಾಗೂ ಇನ್ನಿತರ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ.
ಕಾರ್ಯಕ್ರಮಗಳ ವಿವರ

ಜಾಹೀರಾತು
ಜಾಹೀರಾತು
ಜಾಹೀರಾತು

19ರಂದು ಬೆಳಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಟಾ ಪೂಜೆ, ಬಳಿಕ ಧ್ವಜಾರೋಹಣ ನಡೆಯಲಿದೆ. ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಂಜೆ ಯುವ ಶಕ್ತಿ ಗೆಲೆಯರ ಬಳಗ (ರಿ.) ವಿನಾಯಕನಗರ ಇವರಿಂದ ಭಜನಾ ಸೇವೆ ಹಾಗೂ ದ.ಕ ಜಿಲ್ಲಾ ಪ.ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷರಾದ ಮಲ್ಲಿಕಾ ಅಶೋಕ ಪೂಜಾರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಹಲವರು ಭಾಗಿಯಾಗಲಿದ್ದಾರೆ. ರಾತ್ರಿ 9 ಗಂಟೆಗೆ ಮಹಾಪೂಜೆ ನಡೆಯಲಿದೆ. ಬಳಿಕ ರಾತ್ರಿ 9:30ರಿಂದ ಶ್ರೀ ಶಾರದಾ ಕಲಾಕೇಂದ್ರ ಟ್ರಸ್ಟ್(ರಿ.) ಪುತ್ತೂರು ಇದರ ವಿದ್ವಾನ್ ಶ್ರೀ ಸುದರ್ಶನ್ ಯಂ,ಯಲ್ ಭಟ್ ಇವರ ಮಾರ್ಗದರ್ಶನದಲ್ಲಿ, ನೃತ್ಯ ರಸಸಂಜೆ ಹಾಗೂ ವಿನಾಯಕ ಚರಿತೆ ನೃತ್ಯ ರೂಪಕ ನಡೆಯಲಿದೆ.

20-9-2023ರ ಬುಧವಾರದಂದು ಬೆಳಗ್ಗೆ ವೇದಮೂರ್ತಿ ಶ್ರೀವತ್ಸ ಕೆದಿಲಾಯ ಶಿಬರ ಇವರ ನೃತೃತ್ವದಲ್ಲಿ 108 ತೆಂಗಿನಕಾಯಿ ಗಣಯಾಗ, 11:45ಕ್ಕೆ ಗಣಯಾಗದ ಪೂರ್ಣಾಹುತಿ ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗೊಳ್ಳಿದೆ. ಸಂಜೆ ಧರ್ಮಶ್ರೀ ಭಜನಾ ಮಂಡಳಿ ಅಶ್ವತ್ಥಕಟ್ಟೆ ಕೋಡಿಂಬಾಡಿ ಇವರಿಂದ ಭಜನಾ ಸೇವೆ, ಶ್ರೀಶಾರದಾ ಕಲಾಕೇಂದ್ರ ಉಪ್ಪಿನಂಗಡಿ ಶಾಖೆ, ವಿದುಷಿ ವೈಷ್ಣವಿ ನಾಯಕ್ ಮತ್ತು ವಿದುಷಿ ಅನುಶ್ರೀ ಸಾಮೆತ್ತಡ್ಕ ಇವರ ನೇತೃತ್ವದಲ್ಲಿ ಭರತನಾಟ್ಯ ಕಾರ್ಯಕ್ರಮ ಗಣೇಶೋತ್ಸವಕ್ಕೆ ವಿಶೇಷ ಮೆರುಗು ತುಂಬಲಿದೆ.

ಸಂಜೆ ಧಾರ್ಮಿಕ ಸಭೆ ನೆಡೆಯಲಿದ್ದು, ಅಧ್ಯಕ್ಷತೆಯನ್ನ ಅಜ್ಜಿಬೆಟ್ಟು ಶಾಲೆಯ ಮುಖ್ಯಗುರು ಗೀತಾ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹಾಗೂ ಹಲವರು ಭಾಗಿಯಾಗಲಿದ್ದಾರೆ. 8:30ಕ್ಕೆ ರಂಗಪೂಜೆ, ಬಳಿಕ ಮಹಾಪೂಜೆ ನಡೆಯಲಿದೆ.
ಅದೇ ದಿನ ರಾತ್ರಿ 9:30ರಿಂದ ರಂಗಕೇಸರಿ ರಮೇಶ್ ರೈ ಕುಕ್ಕುವಳ್ಳಿ ಸಾರಥ್ಯದಲ್ಲಿ ಪ್ರಶಸ್ತಿ ವಿಜೇತ ಜೈಮಾತ ಕಲಾ ತಂಡ ಮಂಗಳೂರು, ತೆಲಿಕೆದ ಕಲಾವಿದೆರ್ ಅಬಿನಯದ ಗುಸು ಗುಸು ಉಂಡುಗೆ ನಾಟಕ ಪ್ರದಶನಗೊಳ್ಳಲಿದೆ.

21ರ ಗುರುವಾರದಂದು ಬೆಳಗ್ಗೆ ಭಜನಾ ಸೇವೆ, ಗಣಹೋಮ, ಅಶ್ವತ್ಥ ಪೂಜೆ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ, ಸಂಜೆ ಗಣೇಶ ವಿಸರ್ಜನೆ ಪೂಜೆ ನಡೆದು ಗಣೇಶನ ಭವ್ಯ ಶೋಭಾಯಾತ್ರೆ ಸಾಗಲಿದೆ. ಶಾಂತಿನಗರದ ಕರೆಯಲ್ಲಿ ಮಹಾಗಣಪತಿಯ ವಿಗ್ರಹ ಜಲಸ್ಧಂಭನಗೊಳ್ಳಲಿದೆ.