Friday, January 24, 2025
ಸುದ್ದಿ

10ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಕೇಸರಿ ಫ್ರೆಂಡ್ಸ್, ಸಂತೋಷ್‌ನಗರ : ಶ್ರೀಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರು ಗಣೇಶೋತ್ಸವದಲ್ಲಿ ಸೆ.20ರಂದು ಜರ್ಭದಸ್ತ್ ಡಾನ್ಸ್, ಮ್ಯೂಸಿಕಲ್ ನೈಟ್ ಆಯೋಜನೆ – ಕಹಳೆ ನ್ಯೂಸ್

ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರು ಇದರ ಸಾರ್ವಜನಿಕ ಗಣೇಶೋತ್ಸವವು, ಸೆ.19ರಿಂದ 21ರವರೆಗೆ ನಡೆಯಲಿದೆ. ಗಣೇಶೋತ್ಸವದಲ್ಲಿ ಧಾರ್ಮಿಕ ವಿಧಿ ವಿಧಾನಗಳ ನಡುವೆ, ಡಾನ್ಸ್, ಸಂಗೀತದ ಸವಿ ಉಣಬಡಿಸೊದಿಕ್ಕೆ ಕೇಸರಿ ಫ್ರೆಂಡ್ಸ್, ಸಂತೋಷ್‌ನಗರ ಸಿದ್ದವಾಗಿದೆ.


ಕೇಸರಿ ಫ್ರೆಂಡ್ಸ್, ಸಂತೋಷ್‌ನಗರ ಆರಂಭವಾಗಿ, ಇದೀಗ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಪ್ರತಿ ವರ್ಷ ಗಣೇಶೋತ್ಸವದಂದು ಸಾಂಸ್ಕತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬಂದಿರುವ ಕೇಸರಿ ಫ್ರೆಂಡ್ಸ್ ತಂಡ 10ನೇ ವರ್ಷದ ಸಂಭ್ರಮದಲ್ಲಿ ಪ್ರೇಕ್ಷಕರನ್ನ ಸಂಗೀತದ ಸುಧೆಯಲ್ಲಿ ತೇಲಿಸಲು, ಮ್ಯೂಸಿಕಲ್ ನೈಟ್ ಆರ್ಯಕ್ರಮವನ್ನ ಆಯೋಜನೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಣೇಶೋತ್ಸವದ ಸಡಗರಕ್ಕೆ ಇನ್ನಷ್ಟು ಮೆರುಗು ತುಂಬಲು ಸೆಪ್ಟೆಂಬರ್ 20ರ ಬುಧವಾರದಂದು ಸಂಜೆ, ಕೇಸರಿ ಫ್ರೆಂಡ್ಸ್, ಸಂತೋಷ್‌ನಗರ ಆಶ್ರಯದಲ್ಲಿ, ಶ್ರೀ ದುರ್ಗಾ ಕೆಯ್ಯೂರು ನೃತ್ಯ ತಂಡದ ವತಿಯಿಂದ ವೈವಿಧ್ಯಮಯ ನೃತ್ಯ ರೂಪಕ ನಡೆಯಲಿದೆ. ರಾತ್ರಿ ಗಂಟೆ 9ರಿಂದ ಮ್ಯೂಸಿಕಲ್ ನೈಟ್ ವಿತ್ ಯೂತ್ ಮೆಲೋಡೀಸ್ ಕುಡ್ಲ ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಸುಷ್ಮಾ ಜೆ. ಶೆಟ್ಟಿ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗಜಮುಖನ ಆರಾಧನೆಯ ಜೊತೆಗೆ ಜರ್ಭದಸ್ತ್ ಡಾನ್ಸ್, ಮ್ಯೂಸಿಕಲ್ ನೈಟ್ ಹೊಸ ಲೋಕವನ್ನೆ ಸೃಷ್ಟಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು