Thursday, January 23, 2025
ಸುದ್ದಿ

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿಶಾಲ್.ಪಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮಂಗಳೂರು , ದಕ್ಷಿಣ ವಲಯದ ಕರಾಟೆ ಸ್ಪರ್ಧೆಯು ಶನಿವಾರದಂದು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ, ಮಂಗಳೂರಿನಲ್ಲಿ ನಡೆಯಿತು.


ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕರ ವಿಭಾಗದಲ್ಲಿ (17ರ ವಯೋಮಾನದ) ವಿಶಾಲ್.ಪಿ,10ನೇ ತರಗತಿ [ಶ್ರೀ ವಿಠಲ.ಪಿ ಮತ್ತು ಶ್ರೀಮತಿ ರೇಷ್ಮ ದಂಪತಿ ಪುತ್ರ] ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಪ್ರಮಥ.ಎಮ್.ಭಟ್,10ನೇ ತರಗತಿ [ಶ್ರೀ ರವಿನಾರಾಯಣ.ಎಮ್ ಮತ್ತು ಶ್ರೀಮತಿ ಶರಾವತಿ ದಂಪತಿ ಪುತ್ರ] ದ್ವಿತೀಯ ಪಡೆದಿರುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕಿಯರ ವಿಭಾಗದಲ್ಲಿ [14ರ ವಯೋಮಾನದ)ಅಭಿಜ್ಞಾ ಶಾಂಭವಿ 6ನೇ ತರಗತಿ [ಶ್ರೀ ಸುಧೀರ್.ಬಿ ಮತ್ತು ಶ್ರೀಮತಿ ಲತಾ ಸುಧೀರ್ ದಂಪತಿ ಪುತ್ರಿ] ತೃತೀಯ ಸ್ಥಾನ ಪಡೆದಿರುತ್ತಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು