Wednesday, January 22, 2025
ಸುದ್ದಿ

ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮ – ಕಹಳೆ ನ್ಯೂಸ್

ವೀರಕಂಬ : ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂದ ಬಂಟ್ವಾಳ ತಾಲೂಕಿನ ವಿಟ್ಲ ಆರಕ್ಷಕಠಾಣೆ ವ್ಯಾಪ್ತಿಯ ವೀರಕಂಭ ಗ್ರಾಮ ಬೀಟ್ ಪೊಲೀಸ್ ಮನೋಜ್ ರವರು ದುಶ್ಚಟಗಳಿಗೆ ವ್ಯಸನರಾಗಿ ಅದೆಷ್ಟೋ ಜೀವಗಳು ಬಲಿಯಾಗಿವೆ, ದುಷ್ಟಗಳಿಂದ ದೂರವಿರಲು ಹಾಗೂ ಅವುಗಳ ದಾಸರಾಗದಂತೆ ತನ್ನ ಎಳವೆಯಲ್ಲೇ ಈ ಕುರಿತಾದ ಉತ್ತಮ ಸಂಸ್ಕಾರಯುತವಾದ ಗುಣಮಟ್ಟದ ಕಲಿಕೆ, ಉತ್ತಮ ಗೆಳೆತನ, ಇದಕ್ಕೆ ಕಾರಣವಾಗಿದೆ. ತನ್ನ ಪರಿಸರದಲ್ಲಿ ವ್ಯಸನಕ್ಕೆ ಬಲಿಯಾದ ಜನರ ಬಗ್ಗೆ ಕಾಳಜಿವಹಿಸಿ ಅವರನ್ನು ಸರಿದಾರಿಗೆ ತರಲು ನಿಧೀಷ್ಟ ಸಂಸ್ಥೆಗಳಿಗೆ ದೂರು ನೀಡಬೇಕು, ಶಾಲಾ ಪರಿಸರ ಮತ್ತು ಮನೆಯಲ್ಲಿ ಈ ಬಗ್ಗೆ ಕಂಡುಬAದಾಗ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಕಲ್ಲಡ್ಕ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ, ಶಾಲಾ ,ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು