Sunday, November 24, 2024
ಸುದ್ದಿ

ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್‌ನ ಯಾರ ಪರಿಚಯವೂ ನನಗೆ ಇಲ್ಲ : ತನಿಖೆಯಾಗಲಿ – ಶಾಸಕ ಸುನಿಲ್ ಕುಮಾರ್ –ಕಹಳೆ ನ್ಯೂಸ್

ಉಡುಪಿ : ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶಾಸಕ ಸುನಿಲ್ ಕುಮಾರ್ ಮಾತನಾಡಿದ್ದಾರೆ. ಬಿಜೆಪಿ ಹೆಸರಿನಲ್ಲಿ ಯಾರಿಗೆ ಯಾರು ಕೂಡ ಮೋಸ ಮಾಡಬಾರದು. ಸಿಸಿಬಿ ಅಧಿಕಾರಿಗಳು ಈಗಾಗಲೇ ಬಂಧಿಸಿರುವ ಯಾರ ಮುಖ ಪರಿಚಯ ನನಗೆ ಇಲ್ಲ. ನಾನು ಯಾರ ಜೊತೆಗೆ ನಾನು ಫೋನಲ್ಲಿ ಮಾತಾಡಿ ಕೂಡ ಇಲ್ಲ. ಆಕಸ್ಮಿಕವಾಗಿ ಶುಭ ಸಮಾರಂಭ ಕಾರ್ಯಕ್ರಮಗಳಲ್ಲೂ ಕೂಡ ಭೇಟಿ ಆಗಿಲ್ಲ. ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತೆ ಅನ್ನೋದು ಒಂದು ಭ್ರಮೆ. ಹಣದಿಂದ ಟಿಕೆಟ್ ಸಿಗುತ್ತಿದ್ದರೆ ನಾನು ನಾಲ್ಕು ಬಾರಿ ಗೆದ್ದು ಬರುದಕ್ಕೆ ಸಾಧ್ಯ ಆಗುತ್ತಿರಲಿಲ್ಲ. ರಾಜಕಾರಣಿಗಳ ಹೆಸರು ಹೇಳಿ ಹಣದ ದುರುಪಯೋಗ ಮಾಡುತ್ತಾರೆ ಎಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಘಟನೆಯ ತಾರ್ಕಿಕ ಅಂತ್ಯಕ್ಕೆ ಪೊಲೀಸ್ ಇಲಾಖೆ ತೆಗೆದುಕೊಂಡು ಹೋಗಬೇಕು. ಘಟನೆಯ ಹಿಂದೆ ಯಾರಿದ್ದಾರೆ, ಯಾರು ದುರುಪಯೋಗ ಮಾಡುತ್ತಾರೆ ಅಂತವರನ್ನ ಸಂಪೂರ್ಣವಾಗಿ ಮಟ್ಟ ಹಾಕಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಕಾರಣಿಯ ಹೆಸರು ಹೇಳಿ ಪಕ್ಷದ ಹೆಸರು ಹೇಳಿ ಹಣ ಸಂಗ್ರಹ ಮಾಡುವುದು ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ. ಈ ಘಟನೆಯೇ ಅಂತ್ಯ ಆಗಬೇಕು ಅಂತಹ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು. ನನಗೆ ಯಾವುದೇ ಸಂಬಂಧ ಇಲ್ಲದ ಘಟನೆ ಇದು ಈ ಕುರಿತಂತೆ ಯಾವ ವಿಚಾರಣೆಗೂ ನಾನು ಸಿದ್ಧನಿದ್ದೇನೆ. ಇದರ ಹಿಂದೆ ಯಾರು ಯಾರು ಫೋನ್ ಸಂಪರ್ಕ ಮಾಡಿದ್ದಾರೆ. ಅಂತವರನ್ನು ಮಟ್ಟ ಹಾಕಬೇಕು. ಬಿಜೆಪಿ ಹೆಸರು ಹೇಳಿ ಬಿಜೆಪಿಗೆ ಅವಮಾನ ಮಾಡುವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.