Thursday, January 23, 2025
ಸುದ್ದಿ

ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣ: ಕಣಜಾರಿನಲ್ಲಿ ಗೆಳೆಯನಿಗೆ 2 ಅಂತಸ್ತಿನ ಮನೆ ಕಟ್ಟಿಸುತ್ತಿದ್ದ ಚೈತ್ರ ಕುಂದಾಪುರ – ಕಹಳೆ ನ್ಯೂಸ್

ಉಡುಪಿ : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಐದು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಪೊಲೀಸ್‌ ವಶದಲ್ಲಿರುವ ಚೈತ್ರ ಕುಂದಾಪುರ ಹೊಸ ಮನೆಯೊಂದು ಕಟ್ಟಿಸುತ್ತಿದ್ದರು ಎನ್ನಲಾಗಿದೆ. ಚೈತ್ರ 5 ಕೋಟಿ ರೂ. ಲೂಟಿ ಹೊಡೆದು ಗೆಳೆಯನ ಹೆಸರಲ್ಲಿ ಮನೆ ಕಟ್ಟಿಸುತ್ತಿರುವುದು ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಕಳದ ಕಣಜಾರು ಪ್ರದೇಶದಲ್ಲಿ ಜಾಗ ಖರೀದಿ ಮಾಡಿದ ಚೈತ್ರ, ಶ್ರೀಕಾಂತ್‌ ಹೆಸರಿನಲ್ಲಿ ಮನೆ ಕಟ್ಟಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಆದರೆ ಶ್ರೀಕಾಂತ್‌ನ್ನು ವಶಕ್ಕೆ ಪಡೆದ ಬಳಿಕ ಮನೆಯ ಕಾಮಗಾರಿ ಅರ್ಧದಲ್ಲೇ ನಿಂತಿದೆ ಎನ್ನಲಾಗುತ್ತಿದೆ.

ಕಣಜಾರಿನಲ್ಲಿ ಎರಡು ಎಕರೆಯಲ್ಲಿ ಎರಡು ಅಂತಸ್ತಿನ ಮನೆಯನ್ನು ಚೈತ್ರ ನೇತೃತ್ವದಲ್ಲಿ ಕಟ್ಟಿಸುತ್ತಿದ್ದ ಶ್ರೀಕಾಂತ್ ಎಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ ಉಡುಪಿಯಲ್ಲಿ ಕೈಗಾರಿಕೋದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪದ ಮೇಲೆ ಪೊಲೀಸರು ಚೈತ್ರಾ ಅವರನ್ನು ಬಂಧಿಸಿದ್ದಾರೆ.