Friday, January 24, 2025
ಸುದ್ದಿ

ಸೈಮಾ ಪ್ರಶಸ್ತಿ ಹಿಡಿದು ಮಿಂಚಿದ ರಿಷಬ್ ಶೆಟ್ಟಿ ; ವಿಡಿಯೋ ಶೇರ್ ಮಾಡಿದ ಡಿವೈನ್ ಸ್ಟಾರ್ – ಕಹಳೆ ನ್ಯೂಸ್

ಸೈಮಾ ಅವಾರ್ಡ್ ಹಿಡಿದು ಸಂಭ್ರಮಿಸಿರುವ ವಿಡಿಯೋವನ್ನು ನಟ ರಿಷಬ್ ಶೆಟ್ಟಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸೈಮಾ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ. ಶುಕ್ರವಾರ ಮತ್ತು ಶನಿವಾರ (ಸೆಪ್ಟೆಂಬರ್ 15, 16) ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವಿ ಅವಾರ್ಡ್ಸ್-2023 ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.


ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸ್ಟಾರ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ಸಾಧಕರು, ತಂತ್ರಜ್ಞರೂ ಸೇರಿದಂತೆ ದಕ್ಷಿಣ ಚಿತ್ರರಂಗ ಈ ವರ್ಣರಂಜಿತ ಸಮಾರಂಭಕ್ಕೆ ಸಾಕ್ಷಿಯಾಗಿತ್ತು. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆದ ವೈಭವದ ಕಾರ್ಯಕ್ರಮದಲ್ಲಿ ಕನ್ನಡದ ಕಂಪೂ ಹರಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂತಾರ ವಿವಿಧ ವಿಭಾಗಗಳಲ್ಲಿ ಗೆದ್ದ 10 ಸೈಮಾ ಪ್ರಶಸ್ತಿಗಳು:
ರಿಷಬ್ ಶೆಟ್ಟಿ – ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
ರಿಷಬ್ ಶೆಟ್ಟಿ – ಅತ್ಯುತ್ತಮ ನಟ ಪ್ರಶಸ್ತಿ (ವಿಮರ್ಷಕರ ಆಯ್ಕೆ).
ರಿಷಬ್ ಶೆಟ್ಟಿ – ಅದ್ಭುತ ಕಥೆಗೆ ವಿಶೇಷ ಮೆಚ್ಚುಗೆ ಪ್ರಶಸ್ತಿ.
ಅಚ್ಯುತ್ ಕುಮಾರ್ – ಬೆಸ್ಟ್ ನೆಗೆಟಿವ್ ರೋಲ್ ಪ್ರಶಸ್ತಿ.
ವಿಜಯ್ ಪ್ರಕಾಶ್ – ಅತ್ಯುತ್ತಮ ಗಾಯಕ ಪ್ರಶಸ್ತಿ
ಪ್ರಕಾಶ್ ತುಮಿನಾಡು – ಬೆಸ್ಟ್ ಕಾಮಿಡಿ ನಟ ಪ್ರಶಸ್ತಿ.
ಸಪ್ತಮಿ ಗೌಡ – ಅತ್ಯುತ್ತಮ ನಟಿ ಪ್ರಶಸ್ತಿ (ವಿಮರ್ಷಕರ ಆಯ್ಕೆ).
ಅಜನೀಶ್ ಲೋಕನಾಥ್ – ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ.
ಪ್ರಮೋದ್ ಮರವಂತೆ – ಅತ್ಯುತ್ತಮ ಸಾಹಿತ್ಯ ಬರಹಗಾರ ಪ್ರಶಸ್ತಿ.
ಮುಕೇಶ್ ಲಕ್ಷ್ಮಣ್ – ವಿಶೇಷ ಮೆಚ್ಚುಗೆ ಪ್ರಶಸ್ತಿ. ರಿಷಬ್ ಶೆಟ್ಟಿ ಮೂರು ಪ್ರಶಸ್ತಿಗಳನ್ನು ಪಡೆದಿದ್ದರೆ, ಉಳಿದ ಏಳು ಪ್ರಶಸ್ತಿಗಳು ಚಿತ್ರತಂಡದ ಪಾಲಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು