Monday, November 25, 2024
ಸುದ್ದಿ

ಕುದ್ರೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ಪೋಷಣ ಅಭಿಯಾನದ ಅಂಗವಾಗಿ ಪೌಷ್ಟಿಕ ಸಪ್ತಾಹ, ಸ್ವಸ್ತ ಬಾಲಕ ಸ್ಪರ್ಧೆ, ಕಿಶೋರಿಯರಿಗೆ ರಕ್ತಹೀನತೆ ಬಗ್ಗೆ ಮಾಹಿತಿ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ ಯೋಜನೆಯ ಕುದ್ರೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಕುದ್ರೆಬೆಟ್ಟು,ಪೂರ್ಲಿಪಾಡಿ,ಹಾಗೂ ಕಂಠಿಕ ಅಂಗನವಾಡಿ ಕೇಂದ್ರಗಳ ಸಹಯೋಗದೊಂದಿಗೆ ಪೋಷಣ ಅಭಿಯಾನದ ಅಂಗವಾಗಿ ಪೌಷ್ಟಿಕ ಸಪ್ತಾಹ, ಸ್ವಸ್ತ ಬಾಲಕ ಸ್ಪರ್ಧೆ, ಕಿಶೋರಿಯರಿಗೆ ರಕ್ತಹೀನತೆ ಬಗ್ಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಕೆ ಅಣ್ಣು ಪೂಜಾರಿ ಇವರು ಅಧ್ಯಕ್ಷತೆ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿ ಪೋಷಣ್ ಮಾಸಾಚರಣೆಯ ಬಗ್ಗೆ, ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು, ಬಾಲ್ತಿಲ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ಸ್ವಸ್ತ ಬಾಲಕ ಸ್ಪರ್ಧೆ ನಡೆಸಿಕೊಟ್ಟು, ರಕ್ತಹೀನತೆ ಬಗ್ಗೆ ಕೂಡಾ ಮಾಹಿತಿ ನೀಡಿದರು. ಕುದ್ರೆಬೆಟ್ಟು ಶಾಲಾ ಮುಖ್ಯ ಶಿಕ್ಷಕರು, ಗ್ರಾಮ ಪಂಚಾಯತ್ ಸದಸ್ಯರು, ಬಾಲವಿಕಾಸ ಸಮಿತಿ ಅಧ್ಯಕ್ಷ, ಮಣಿಕಂಠ ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ರಮೇಶ್, ಸ್ತ್ರೀ ಶಕ್ತಿ ಸದಸ್ಯರು, ಪೋಷಕರು, ಮಕ್ಕಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಕಾರ್ಯಕರ್ತೆ ಉಮಾವತಿ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಲೀಲಾವತಿ ಕಾರ್ಯಕ್ರಮ ನಿರೂಪಿಸಿ, ಕಾರ್ಯಕರ್ತೆ ಸುರೇಖಾ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು