Tuesday, January 28, 2025
ಸುದ್ದಿ

ಸರ್ವರಿಗೂ ಗಣೇಶ ಹಬ್ಬದ ಶುಭಾಷಯ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ – ಕಹಳೆ ನ್ಯೂಸ್

ಸರ್ವರಿಗೂ ಗಣೇಶ ಹಬ್ಬದ ಶುಭಾಷಯ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಲ್ಲರ ಬಾಳಲ್ಲಿ ನೆಮ್ಮದಿ ತರಲಿ ಎಂದು ಪ್ರಾರ್ಥಿಸಿದ್ದಾರೆ.
ಈ ಕುರಿತು ಸಂದೇಶ ನೀಡಿರುವ ಅವರು, ಹಬ್ಬದ ಆಚರಣೆ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಎಚ್ಚರವಿರಲಿ ಎಂದು ಪಾಲಕರಲ್ಲಿ ಮನವಿ ಮಾಡಿದ್ದಾರೆ.


ಈ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಜನರ ಬಾಳಲ್ಲಿ ನೆಮ್ಮದಿ ತರುವ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ತನ್ಮೂಲಕ ಶೇ. 80ಕ್ಕಿಂತ ಹೆಚ್ಚು ಕುಟುಂಬಗಳಿಗೆ ಒಂದಿಲ್ಲೊAದು ಯೋಜನೆಗಳನ್ನು ತಲುಪಿಸುವ ಪ್ರಯತ್ನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳ ಮೂಲಕ ರಾಜ್ಯದ ಎಲ್ಲ 7 ಕೋಟಿ ಜನರನ್ನೂ ತಲುಪುತ್ತೇವೆ. `ಯಾವ ಸರಕಾರ ಬಂದರೆ ನಮಗೇನು’ ಎನ್ನುವ ಜನಸಾಮಾನ್ಯರ ಹಿಂದಿನ ಭಾವನೆಯನ್ನು ಹೋಗಲಾಡಿಸಿ, ಎಲ್ಲರಲ್ಲೂ `ಇದು ನಮ್ಮ ಸರಕಾರ’ ಎನ್ನುವ ಭಾವನೆ ಬರುವಂತೆ ನಾವು ನಡೆಯುತ್ತಿದ್ದೇವೆ. ಮುಂದಿನ ದಿನಗಳು ಇನ್ನಷ್ಟು ಆಶಾದಾಯಕವಾಗಿರುತ್ತವೆ ಎನ್ನುವ ಭರವಸೆ ನೀಡುತ್ತ, ಮಳೆ, ಬೆಳೆ ಎಲ್ಲವೂ ಉತ್ತಮವಾಗಿ ಸರ್ವೇ ಜನಾಃ ಸುಖಿನೋ ಭವಂತು ಎನ್ನುವಂತೆ ಎಲ್ಲರೂ ಜೀವನದಲ್ಲಿ ನೆಮ್ಮದಿ ಕಾಣಲಿ ಎಂದು ಆಶಿಸುತ್ತೇನೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು