Saturday, November 23, 2024
ಸುದ್ದಿ

ಮಂಗಳೂರಲ್ಲಿ ಶಬರಿಮಲೆ ಉಳಿಸಲು ಬೃಹತ್ ಜಾಗೃತಿ ಸಮಾವೇಶ – ಕಹಳೆ ನ್ಯೂಸ್

ಮಂಗಳೂರು: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಮಂಗಳೂರಲ್ಲಿ ವಿರೋಧ ವ್ಯಕ್ತವಾಗಿದೆ. ಈ ಪ್ರಯುಕ್ತ ಮಂಗಳೂರಲ್ಲಿ ಶಬರಿಮಲೆ ಉಳಿಸಲು ಅಯ್ಯಪ್ಪ ಸೇವಾ ಸಮಿತಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಮಂಗಳೂರಿನ ಕದ್ರಿ ಮೈದಾನದಲ್ಲಿ ನಡೆದ ಶಬರಿಮಲೆ ಉಳಿಸಿ ಬೃಹತ್ ಜಾಗೃತಿ ಸಮಾವೇಶದ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಭಾಗಿಯಾಗಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ನ ತೀರ್ಪು ಆಘಾತಕಾರಿಯಾಗಿದೆ. ಹಿಂದೂ ಧರ್ಮೀಯರ ಪವಿತ್ರ ಕ್ಷೇತ್ರ ಶಬರಿಮಲೆಯಾಗಿದೆ. ಇಲ್ಲಿ ಪ್ರವೇಶಿಸಲು ಅದಕ್ಕೆ ಆದ ನಿಯಮಗಳಿವೆ. ಆದ್ರೆ ಸುಪ್ರೀಂ ಕೋರ್ಟ್ ಇದಕ್ಕೆ ತದ್ವಿರುದ್ಧವಾದ ತೀರ್ಪು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಕದ್ರಿ ಮೈದಾನದಿಂದ ಕದ್ರಿ ದೇಗುಲಕ್ಕೆ ಮೆರವಣಿಗೆ ಮೂಲಕ ಸಾಗಿ ಶಬರಿಮಲೆ ಉಳಿಸಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು. ಈ ಪ್ರತಿಭಟನೆಗೆ ಬಿಗಿ ಪೊಲೀಸ್ ಬಂದೋಬಸ್ತನ್ನ ಕಲ್ಪಿಸಲಾಗಿತ್ತು.