Sunday, January 19, 2025
ಸುದ್ದಿ

ನನ್ನ ದೇಹದ ಕೊನೆ ಉಸಿರು ಇವರುವವರೆಗೂ ನಾನು ಬಿಜೆಪಿ ಮನೆ ಮಗನೇ, ಅಪಪ್ರಚಾರ ಮಾಡಬೇಡಿ – ಅಶೋಕ್ ರೈ.

ಪುತ್ತೂರು : ರಾಜ್ಯದ ಚುನಾವಣಾ ಸಂದರ್ಭದಲ್ಲಿ ಬಿ.ಜೆ.ಪಿ.ಯ ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದಾದ ಪುತ್ತೂರು ವಿಧಾನಸಭಾ ಕ್ಷೇತ್ರದ ಭಾವಿ ಬಿ.ಜೆ.ಪಿ. ಅಭ್ಯರ್ಥಿ ಎಂದೇ ಹೇಳ್ಪಡುವ ಅಶೋಕ್ ಕುಮಾರ್ ರೈ ಯವರು ಜೆ.ಡಿ.ಎಸ್. ಸೇರ್ತಾರೆ ಎಂದು ಬಿಸಿ ಬಿಸಿ ಚರ್ಚೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಅಶೋಕ್ ರೈ ಸ್ಪಷ್ಟಣೆ ನೀಡಿದ್ದಾರೆ. ನನ್ನ ರಾಜಕೀಯ ಮತ್ತು ಸಮಾಜಿಕ ಚಟುವಟಿಕೆಗಳನ್ನು ಕಂಡು ಸಹಿಸದವರು ಇಂತಹ ಅಪಪ್ರಚಾರ ಮಾಡುದರಲ್ಲಿ ತೊಡಗಿದ್ದಾರೆ. ನಾನು ಹುಟ್ಟಿನಿಂದಲೇ ಬಿ.ಜೆ.ಪಿ. ನನ್ನ ಜೀವನದ ಕೊನೆ ಉಸಿರು ಇವರ ವರೆಗೂ ನಾನು ಬಿ.ಜೆ.ಪಿ.ಯೇ ಎಂದು ಅಶೋಕ್ ರೈ ಹೇಳಿದ್ದಾರೆ.

ಈ ಅಪಪ್ರಚಾರದ ಕುರಿತು ಕಹಳೆ ನ್ಯೂಸ್ ಜೊತೆ ಮಾತನಾಡಿದ ಅವರು ಅಶೋಕ್ ಯಾವತ್ತೂ ಅಧಿಕಾರ ಕುರ್ಚಿ ಆಸೆ ಇಟ್ಟುಕೊಂಡು ಬಿ.ಜೆ.ಪಿ. ಸೇರಿದವನಲ್ಲ, ಯಾವ ಮುಖವಾಡವೂ ಧರಿಸಿಲ್ಲ, ಹುಟ್ಟಿದಾಗಿನಿಂದಲೇ ಆರ್.ಎಸ್.ಎಸ್. ವಿಚಾರಧಾರೆಯಿಂದ ಸ್ಫೂರ್ತಿ ಪಡೆದು, ರಾಷ್ಟ್ರೀಯ ವಿಚಾರಗಳನ್ನು ಮೈಗೂಡಿಸಿಕೊಂಡು, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇಷ್ಟು ವರ್ಷ ಸೇವೆ ಸಲ್ಲಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರಿಂದಲೂ ಪ್ರಭಾವಿತನಾಗಿದ್ದೇನೆ. ಅವರು ನನಗೆ ಆದರ್ಶ, ಸಂಸದರಾದ ನಳೀನ್ ಕುಮಾರ್ ಕಟೀಲ್ ಉತ್ತಮ ಸ್ನೇಹಿತ, ಹೀಗಿರುವಾಗ ಅನ್ಯ ಪಕ್ಷದ ಮಾತೇ ಇಲ್ಲ! ಇದು ಕೇವಲ ವಿರೋಧಿಗಳ ಶಡ್ಯಂತ್ರ. ಇವತ್ತು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾವಿರಾರು ಕುಟುಂಬಗಳಿಗೆ ನನ್ನ ಸ್ವಂತ ಉದ್ಯಮ ಕ್ಷೇತ್ರದಲ್ಲಿ ಬಂದ ಹಣವನ್ನು ಸೇವೆಯ ರೂಪದಲ್ಲಿ ಸಾಹಾಯವಾಗಿ ನೀಡುತ್ತಿದೇನೆ. ರೈ ಚಾರಿಟಬಲ್ ಟ್ರಸ್ಟ್ ಮೂಲಕ ಹತ್ತಾರು ಸಮಾಜಿಕ ಕಾರ್ಯ ನಡೆಸಿಕೊಂಡು ಬಂದಿದ್ದೇನೆ. ಇವತ್ತು ಜನರು ನನ್ನ ಮೇಲಿಟ್ಟಿರು ಅಪಾರವಾದ ಪ್ರೀತಿ ವಿಶ್ವಾಸ ನೋಡಿ, ನನ್ನ ಏಳಿಗೆ ಸೈಸದೆ ಇಂತಹ ಸುದ್ಧಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಮಹತ್ವಕೊಡುವ ಅವಶ್ಯಕತೆ ಇಲ್ಲ. ಅಶೋಕ್ ರೈ ಏನು ಎಂಬುದು ಜನಕ್ಕೆ ಗೊತ್ತಿದೆ. ನಾನು ಅವತ್ತೂ ಬಿ.ಜೆ.ಪಿ. ಇವತ್ತೂ ಬಿ.ಜೆ.ಪಿ. ಯಾವತ್ತೂ ಬಿ.ಜೆ.ಪಿ. ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆಲುಕು : ಅಶೋಕ್ ಕುಮಾರ್ ರೈ ಪುತ್ತೂರಿನ ಸಂಭಾವ್ಯ ಬಿ.ಜೆ.ಪಿ. ಅಭ್ಯರ್ಥಿಗಳ ಸಾಲಿನಲ್ಲಿ ಮೊದಲಿಗರು, ಅಲ್ಲದೆ ಇಂದು ಪುತ್ತೂರಿನಲ್ಲಿ ಹತ್ತಾರು ಜನಪರ ಯೋಜನೆಗಳ ಮೂಲಕ ಮನೆಮಾತಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response