Recent Posts

Monday, January 20, 2025
ಸುದ್ದಿ

ರೂಪಾಯಿ ಮೌಲ್ಯ ಕುಸಿತ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ನೆರವು ಪಡೆಯಲು ಚಿಂತನೆ – ಕಹಳೆ ನ್ಯೂಸ್

ದೆಹಲಿ: ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದು, ಇದನ್ನು ಸರಿದೂಗಿಸಲು ಭಾರಿ ಕಸರತ್ತು ನಡೆಸುತ್ತಿರುವ ಕೇಂದ್ರ ಸರಕಾರ ಇದೀಗ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ನೆರವು ಪಡೆಯಲು ಚಿಂತನೆ ನಡೆಸಿದೆ.

ನೂತನ ಯೋಜನೆಯಲ್ಲಿ, ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದ ಸಹಾಯ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದು, ಬಾಂಡ್ ಖರೀದಿ ಹಾಗೂ ಡಾಲರ್ ಡೆಪಾಸಿಟ್ ಮಾಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ಸೆಂಟ್ರಲ್ ಬ್ಯಾಂಕ್ ಅಧಿಕಾರಿಗಳು ಚರ್ಚಿಸಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರೂಪಾಯಿ ಮೌಲ್ಯ ಶೇ.14 ರಷ್ಟು ಕುಸಿತವಾಗುವ ಮೂಲಕ ಏಷ್ಯಾದಲ್ಲಿ ಕೆಟ್ಟ ಸಾಧನೆ ಮಾಡಿದೆ. ಇದರಿಂದ ಪೆಟ್ರೊಲಿಯಂ ಉತ್ಪನ್ನ ಸೇರಿ ಹಲವು ವಿದೇಶಿ ವ್ಯಾಪಾರದಲ್ಲಿ ತೊಂದರೆಯಾಗಲಿದೆ ಎಂದು ಅರಿತ ಸರಕಾರ ಎನ್ ಆರ್ ಐ ನೆರವು ಪಡೆಯಲು ಸಜ್ಜಾಗಿದೆ ಎನ್ನಲಾಗಿದೆ.

ಈ ಹಿಂದೆಯೂ ಡಾಲರ್ ಎದುರು ರೂಪಾಯಿ ಬಿದ್ದಾಗ, ಡಾಲರ್ ಶೇಖರಣೆ ಹಾಗೂ ಬಾಂಡ್ ಮಾರಾಟವನ್ನು ಕೇಂದ್ರ ಸರಕಾರ ಮಾಡಿತ್ತು. ಇದೀಗ ಮತ್ತೊಮ್ಮೆ ಈ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಆರ್.ಬಿ.ಐ. ನಿರಾಕರಿಸಿದೆ.