Friday, September 20, 2024
ಸುದ್ದಿ

ವಿಶ್ವವಿಖ್ಯಾತ ಮೈಸೂರು ದಸರಾಗೆ ಸುಧಾಮೂರ್ತಿಯವರಿಂದ ಚಾಲನೆ ; ಸಾಂಸ್ಕೃತಿಕ ನಗರಿಯಲ್ಲಿ ಹತ್ತು ದಿನಗಳ ಕಾಲ ಕಲೆ, ಸಾಹಿತ್ಯ, ಸಂಗೀತದ ರಸದೌತಣ – ಕಹಳೆ ನ್ಯೂಸ್

ಬೆಂಗಳೂರು : ಹತ್ತು ದಿನಗಳ ಕಾಲ ಕಲೆ, ಸಾಹಿತ್ಯ, ಸಂಗೀತದ ರಸದೌತಣ ನೀಡುವ ಜಗತ್ಪ್ರಸಿದ್ಧ 408ನೇ ಮೈಸೂರು ದಸರಾ ಮಹೋತ್ಸವಕ್ಕೆ ಮಲ್ಲಿಗೆ ನಗರಿಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಚಾಲನೆ ನೀಡಿದ್ದಾರೆ.

ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಡನೆ ಬೆಳಗ್ಗೆ 7.05ರಿಂದ 7.35ರ ಸಲ್ಲುವ ಶುಭ ತುಲಾ ಲಗ್ನದಲ್ಲಿ ಇಸ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ದಸರೆಗೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ಅನೇಕ ಸಚಿವ, ಶಾಸಕರು ಉಪಸ್ಥಿತಿರಿದ್ದರು.

ಜಾಹೀರಾತು

ಮೈಸೂರು ದಸರಾ ಅಂಗವಾಗಿ ಮಂಗಳವಾರದಂದೇ ಕ್ರೀಡಾ ದಸರಾ, ಚಲನಚಿತ್ರೋತ್ಸವ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ಪುಸ್ತಕ ಮೇಳ, ವಸ್ತು ಪ್ರದರ್ಶನಗಳಿಗೆ ಚಾಲನೆ ದೊರಕಲಿದೆ. ಜೊತೆಗೆ ಹಸಿರು ಮಂಟಪ, ಗಾಜಿನ ಮನೆ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಉದ್ಘಾಟನೆಗೊಳ್ಳಲಿವೆ.

ನವರಾತ್ರಿಯ ಮರುದಿನವಾದ ಅ.19 ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದೆ. ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲ ಗೌರವ ವಂದನೆ ಸ್ವೀಕರಿಸುವರು. ಅದರೊಂದಿಗೆ ದಸರೆಗೆ ತೆರೆ ಬೀಳಲಿದೆ.