Recent Posts

Sunday, January 19, 2025
ಸುದ್ದಿ

ಭಯ ನನ್ನನ್ನು ಆವರಿಸಿದ್ರೆ ನನ್ನ ಹೋರಾಟ ಇಲ್ಲಿಗೆ ಮುಗಿದಂತೆ: ಸೋನಾಲಿ ಬೇಂದ್ರೆ – ಕಹಳೆ ನ್ಯೂಸ್

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸೋನಾಲಿ ಸಾಮಾಜಿಕ ಜಾಲತಾಣದ ಮೂಲಕವೇ ತಮ್ಮ ಕ್ಯಾನ್ಸರ್ ವಿಷ್ಯವನ್ನು ಜನರ ಮುಂದಿಟ್ಟಿದ್ದರು. ಆಗಾಗ ಇನ್ಸ್ಟ್ರಾಗ್ರಾಮ್‌ನಲ್ಲಿ ಚಿಕಿತ್ಸೆ, ಅನುಭವಿಸುವ ನೋವನ್ನು ಪ್ರಾಮಾಣಿಕವಾಗಿ ಹೇಳಿಕೊಳ್ತಾರೆ. ಜೊತೆಗೆ ತಮ್ಮನ್ನು ಸಂಭಾಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಸದ್ಯ ಸೋನಾಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಭಯ ನನ್ನನ್ನು ಆವರಿಸಿದ್ರೆ ನನ್ನ ಹೋರಾಟ ಇಲ್ಲಿಗೆ ಮುಗಿದಂತೆ ಎಂದು ಬರವಣಿಗೆ ಆರಂಭಿಸಿರುವ ಸೋನಾಲಿ, ಚೆರಿಲ್ ಸ್ಪೆçಡ್ ವೈಲ್ಡ್ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಿಮೋಥೆರಪಿ ಹಾಗೂ ಶಸ್ತ್ರಚಿಕಿತ್ಸೆ ನಂತ್ರ ನಗಲೂ ನೋವಾಗ್ತಾ ಇತ್ತು ಮತ್ತು ನಾವು ಸುಖ, ದುಃಖ ಎರಡನ್ನೂ ಅನುಭವಿಸಲು ಬಂದಿದ್ದೇವೆ. ಹಾಗಾಗಿ ಅಳಲು, ನೋವನ್ನನುಭವಿಸಲು ನನಗೇ ನಾನೇ ಅನುಮತಿ ನೀಡಿದ್ದೇನೆಂದು ಸೋನಾಲಿ ಹೇಳಿದ್ದಾರೆ. ಸೋನಾಲಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬಸ್ಥರಿಂದ ದೂರವಿರುವ ನೋವು ಅವ್ರನ್ನು ಕಾಡ್ತಿದೆಯಂತೆ.