Recent Posts

Sunday, January 19, 2025
ಸುದ್ದಿ

ಗಗನಕ್ಕೇರುತ್ತಿದೆ ತೈಲ ಬೆಲೆ: ಇಂದು ಡಿಸೇಲ್ ಬೆಲೆ ಹೆಚ್ಚಳ – ಕಹಳೆ ನ್ಯೂಸ್

ದೆಹಲಿ: ದಿನದಿಂದ ದಿನಕ್ಕೆ ಇಂಧನ ಬೆಲೆ ಏರಿಕೆಯಾಗುತ್ತಿದ್ದು ಇಂದು ಸಹ ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಆದ್ರೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೇಲ್ ಬೆಲೆ 24 ಪೈಸೆ ಹೆಚ್ಚಳ ಕಂಡಿದ್ದು, ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿಲ್ಲ. ದೆಹಲಿ ಸರ್ಕಾರ ತೈಲದ ಮೇಲೆ ಹೇರಿರುವ ವ್ಯಾಟ್ ದರ ಇಳಿಕೆಗೆ ನಿರಾಕರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರ್ಕಾರ ಕಳೆದ ವಾರ ಪೆಟ್ರೋಲ್-ಡಿಸೇಲ್ ಮೇಲೆ ಹೇರಿರುವ ತೆರಿಗೆಯನ್ನು 2.50 ರೂಪಾಯಿ ಇಳಿಕೆ ಮಾಡಿತ್ತು. ಇದಾದ ನಂತರ ಅನೇಕ ರಾಜ್ಯಗಳು ವ್ಯಾಟ್ ದರವನ್ನು ಇಳಿಕೆ ಮಾಡಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ 5 ರೂಪಾಯಿ ಇಳಿಕೆ ಕಂಡು ಬಂದಿತ್ತು. ಆದ್ರೆ ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಯಿಂದಾಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ.