Wednesday, January 22, 2025
ಸುದ್ದಿ

ವಿಟ್ಲ ಪೇಟೆಯ ಮೂರು ಕಡೆ ಸರಣಿ ಕಳ್ಳತನ – ಕಹಳೆ ನ್ಯೂಸ್

ವಿಟ್ಲ: ವಿಟ್ಲ ಪೇಟೆಯ ಮೂರು ಕಡೆ ಸರಣಿ ಕಳ್ಳತನ ನಡೆದ ಘಟನೆ ನಡೆದಿದೆ.

ಬೊಬ್ಬೆಕೇರಿಯ ಕಾವೇರಿ ಬಾರ್, ಮೇಗಿನ ಪೇಟೆಯ ಬಿಗ್ ಬೇಕ್ಸ್ ಬೇಕರಿ ಹಾಗೂ ಮಂಗಿಲಪದವಿನಲ್ಲಿ ಅಂಗಡಿಯಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವೇರಿ ಬಾರ್‍ನಲ್ಲಿ ಸು.40,000ರೂ. ನಗದು, ಸ್ಪೀಕರ್, ಮದ್ಯದ ಕೆಲವು ಬಾಟಲ್‍ಗಳನ್ನು ಕೊಂಡೋಯ್ದ ಕಳ್ಳರು, ಸ್ವಲ್ಪ ಮದ್ಯದ ಬಾಟಲಿಗಳನ್ನು ಹೊರಗೆ ಇಟ್ಟು ತೆರಳಿದ್ದಾರೆ. ಮೇಗಿನ ಪೇಟೆಯ ಬಿಗ್ ಬೇಕ್ಸ್ ಬೇಕರಿಯಲ್ಲಿ ಹರಕೆ ಡಬ್ಬಿ, ಚಾಕಲೇಟ್, ಮೊಬೈಲ್, ನಗದು ದೋಚಿದ್ದಾರೆ.