Monday, January 20, 2025
ಸುದ್ದಿ

ಶ್ರೀ ಪಲಿಮಾರು ಮಠದಲ್ಲಿ ನಡೆದ ಹಿರಿಯ ಹಾಗೂ ಕಿರಿಯ ಸ್ವಾಮೀಜಿಯವರ ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮ – ಕಹಳೆ ನ್ಯೂಸ್

ಉಡುಪಿ : ಶ್ರೀ ಪಲಿಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರ 45ನೇ ಚಾತುರ್ಮಾಸ್ಯದ ಹಾಗೂ ಕಿರಿಯ ಶ್ರೀಪಾದರಾದ ಶ್ರೀ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರ 5ನೇ ಚಾತುರ್ಮಾಸ್ಯದ ಸೀಮೋಲ್ಲಂಘನವನ್ನು ಶ್ರೀಕ್ಷೇತ್ರ ಕಂಚಿಯಲ್ಲಿ ನೆರೆವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾತಃಕಾಲ ಶ್ರೀಮಠದ ಸಂಸ್ಥಾನ ಪೂಜಾದಿಗಳನ್ನು ನೆರೆವೇರಿಸಿ, ನಂತರ ಕಂಚಿಯ ಶ್ರೀವರದರಾಜನ ದೇಗುಲದ ಆಹ್ವಾನದಮೇರೆಗೆ ಅಲ್ಲಿಗೆ ತೆರಳಿ, ಕಂಚಿ ಕಾಮಾಕ್ಷಿ ದರ್ಶನವನ್ನು ಮಾಡಿ ನಂತರ ಶ್ರೀವರದರಾಜನ ದೇಗುಲದ ಸುತ್ತಲೂ ಛತ್ರ, ವಾದ್ಯ, ಸುಡುಮದ್ದು ಸಹಿತವಾಗಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತೆರಳಿ ಶ್ರೀವರದರಾಜನ ದರ್ಶನ ಶ್ರೀಮಠದ ಉಭಯ ಶ್ರೀಗಳೂ ಮಾಡಿ, ಅಲ್ಲಿನ ಶ್ರೀವ್ಯಾಸರಾಜ ಮಠಕ್ಕೆ ತೆರಳಿ ಸಾಯಂಕಾಲದ ಪೂಜಾ ಕೈಂಕರ್ಯವನ್ನು ನೆರೆವೇರಿಸಿದರು.