Monday, January 20, 2025
ಸುದ್ದಿ

ಜಿಲ್ಲೆಯಲ್ಲಿ ಲಭ್ಯವಿರುವ ಮರಳು, ಕಟ್ಟಡ ಕಲ್ಲುಗಳ ಪ್ರಮಾಣದ ವಿವರ – ಕಹಳೆ ನ್ಯೂಸ್

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ಲಭ್ಯವಿರುವ ಮರಳು, ಕಟ್ಟಡ ಕಲ್ಲು, ಮುರಕ್ಲಲು ಉಪಖನಿಜಗಳ ಪ್ರಮಾಣದ ವಿವರದ ಕುರಿತು ಉಡುಪಿ ಜಿಲ್ಲಾಡಳಿತ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಪಖನಿಜಗಳ ಪ್ರಮಾಣ ಮತ್ತು ಬೇಡಿಕೆಗಳ ವಿವರ….

ಜಾಹೀರಾತು
ಜಾಹೀರಾತು
ಜಾಹೀರಾತು

ಕಟ್ಟಡ ಕಲ್ಲು ಉಡುಪಿ ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ಒಟ್ಟು 127 ಅಧಿಕೃತ ಕಟ್ಟಡ ಕಲ್ಲುಗಣಿ ಗುತ್ತಿಗೆಗಳಿಂದ ಒಟ್ಟು 32,62,808 ಮೆ.ಟನ್ ಪ್ರಮಾಣದ ಉಪಖನಿಜವನ್ನು ವಾರ್ಷಿಕವಾಗಿ ಉತ್ಪಾದನೆ ಮಾಡಲಾಗುತ್ತಿದೆ. ಜಿಲ್ಲೆಯ ಬೇಡಿಕೆಯ ಪ್ರಮಾಣವು ಅಂದಾಜು 20,00,000 ಮೆ.ಟನ್ ಗಳಾಗಿದ್ದು, ಜಿಲ್ಲೆಯ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಸಾಮಾನ್ಯ ಮರಳು: ಒಂದು ತಿಂಗಳಿಗೆ ಅಂದಾಜು 65,500 ಮೆ.ಟನ್ ಪ್ರಮಾಣದ ಸಾಮಾನ್ಯ ಮರಳು ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾಗಿದ್ದು, ಈಗಾಗಲೇ ಒಟ್ಟು 1,32,215 ಮೆ.ಟನ್ ಪ್ರಮಾಣದ ಸಾಮಾನ್ಯ ಮರಳು ಲಭ್ಯವಿರುತ್ತದೆ. ಉಳಿದ ಗ್ರಾಮ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸದ 41 ಮರಳು ಬ್ಲಾಕುಗಳಲ್ಲಿ ಅಕ್ಟೋಬರ್ ತಿಂಗಳಿಂದ ಸಾಮಾನ್ಯ ಮರಳನ್ನು ಪೂರೈಸಲಾಗುತ್ತದೆ. ಪರಿಸರ ವಿಮೋಚನಾ ಪತ್ರದಲ್ಲಿ ಜೂನ್ 15 ರಿಂದ ಅಕ್ಟೋಬರ್ 15 ರವರೆಗೆ ನಿರ್ಬಂಧವಿದ್ದು, ಪ್ರಸ್ತುತ ಮರಳು ಗಣಿ ಗುತ್ತಿಗೆಗಳಲ್ಲಿ ಮರಳುಗಾರಿಕೆ ಕಾರ್ಯವು ಸ್ಥಗಿತಗೊಂಡಿರುತ್ತದೆ. ಅದರಂತೆ ಒಟ್ಟು 03 ಮರಳು ಗುತ್ತಿಗೆಗಳಿಂದ 96,220 ಮೆ.ಟನ್ ಸಾಮಾನ್ಯ ಮರಳು ಲಭ್ಯವಿರುತ್ತದೆ.

ಪರಿಸರ ವಿಮೋಚನಾ ಪತ್ರದ ಪ್ರಕ್ರಿಯೆಯಲ್ಲಿರುವ 19 ಮರಳು ಬ್ಲಾಕುಗಳಲ್ಲಿ ಒಟ್ಟು 3,44,603 ಮೆಟನ್ ಪ್ರಮಾಣದ ಮರಳು ಲಭ್ಯವಿರುತ್ತದೆ. ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಬಾಕಿ ಇರುವ ಒಟ್ಟು 36 ಮರಳು ಬ್ಲಾಕ್ ಗಳಲ್ಲಿ ಒಟ್ಟು 12,01,751 ಮೆ.ಟನ್ ಪ್ರಮಾಣದ ಮರಳು ಲಭ್ಯವಿರುತ್ತದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1,61,360 ಮೆಟನ್ ಪ್ರಮಾಣದ ಎಂ-ಸ್ಯಾಂಡ್ ಲಬ್ಯವಿರುತ್ತದೆ. ಕಟ್ಟಡ ನಿರ್ಮಾಣ ಸಾಮಾಗ್ರಿಗಳಿಗೆ ಉಡುಪಿ ಜಿಲ್ಲೆಯಲ್ಲಿ ಕೊರತೆಯಿರುವುದಿಲ್ಲ. ಸರ್ಕಾರವು 2022 ನೇ ಸಾಲಿನ ಡಿಸೆಂಬರ್ ಮಾಹೆಯಿಂದ ಅನ್ವಯವಾಗು ವಂತೆ ಉಪಖನಿಜ ಸರಬರಾಜು ಮಾಡುವ ಎಲ್ಲಾ ವಾಹನಗಳಿಗೆ ಜಿ.ಪಿ.ಎಸ್ ಅನ್ನು ಕಡ್ಡಾಯಗೊಳಿಸಿದ್ದು, ಅದರಂತೆ ಜಿ.ಪಿ.ಎಸ್ ಅಳವಡಿಸಿಕೊಂಡಲ್ಲಿ ILMS (Integrated Lease Management System) ತಂತ್ರಾಂಶದಲ್ಲಿ ಖನಿಜ ಸಾಗಾಣಿಕೆ ಪರವಾನಿಗೆಯನ್ನು ತೆಗೆಯಲು ಸಾಧ್ಯವಾಗುತ್ತದೆ.

ಕಟ್ಟಡ ಸಾಮಾಗ್ರಿ ಸಾಗಾಣಿಕೆ ವಾಹನಗಳಿಗೆ 07.10. 2023 ರವರೆಗೆ ಜಿ.ಪಿ.ಎಸ್ ಅನ್ನು ಅಳವಡಿಸಿಕೊಳ್ಳಲು ಕಾಲಾವಕಾಶವನ್ನು ನೀಡಲಾಗಿದೆ. ಆದ್ದರಿಂದ ಕಟ್ಟಡ ನಿರ್ಮಾಣ ಮಾಡುವವರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಕಟ್ಟಡ ಕಲ್ಲು, ಜಲ್ಲಿ, ಎಂ-ಸ್ಯಾಂಡ್ ಅವಶ್ಯಕತೆಯಿದ್ದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಂಟ್ರೋಲ್ ರೂಮ್ ನ ದೂರವಾಣಿ ಸಂಖ್ಯೆ: 0820-2950088 ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಸಂಪರ್ಕಿಸಬಹುದಾಗಿರುತ್ತದೆ. ಲಾರಿ ಮಾಲೀಕರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಸಹಕರಿಸಲು ಜಿಲ್ಲಾಡಳಿತ ಪ್ರಕಟಣೆಯಲ್ಲಿ ಕೋರಿದೆ.