Monday, January 20, 2025
ಸುದ್ದಿ

ಸ್ವಚ್ಛ ಭಾರತ್ ಅಭಿಯಾನದಂಗವಾಗಿ, ಮೂಡುಬಿದಿರೆಯಲ್ಲಿ ವಿವಿಧ ಸಂಘಟನೆಗಳಿoದ ಬೃಹತ್ ಸ್ವಚ್ಛತಾ ಅಭಿಯಾನ – ಕಹಳೆ ನ್ಯೂಸ್

ಮೂಡುಬಿದಿರೆ : ಸ್ವಚ್ಛ ಭಾರತ್ ಅಭಿಯಾನದಂಗವಾಗಿ ಪುರಸಭೆಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳಿAದ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಭಾನುವಾರ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.


ಪವರ್ ಫ್ರೆಂಡ್ಸ್ ಬೆದ್ರ ಸಂಘಟನೆಯು ಖಾಸಗಿ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪವರ್ ಫ್ರೆಂಡ್ಸ್ ನ ಜಯಪ್ರಕಾಶ್ ಅವರು ಮಾತನಾಡಿ ಸ್ವಚ್ಛ ಅಭಿಯಾನದ ಪ್ರಯುಕ್ತ ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಪ್ಲಾಸ್ಟಿಕ್, ಕಸ ಕಡ್ಡಿಗಳು ಮುಂತಾದ ತ್ಯಾಜ್ಯಗಳನ್ನು ಹೆಕ್ಕಿ ತೆಗೆಯಲಾಯಿತು. ಪ್ರತಿವಾರವು ಇಂತಹ ಅಭಿಯಾನಗಳನ್ನು ಮಾಡುವುದಲ್ಲದೆ ಪೇಟೆಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಹೊಂದಿರುವವರಿಗೆ ತ್ಯಾಜ್ಯದ ಬಗ್ಗೆ ಅರಿವು ಮೂಡಿಸುವಂತಹ ಕೆಲಸಗಳನ್ನು ಕೈಗೊಳ್ಳುತ್ತೇವೆಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಚ್ಛತಾ ಕಾರ್ಯಕ್ಕೆ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 8 ತಂಡಗಳನ್ನು ಮಾಡಲಾಗಿತ್ತು. ಆಲಂಗಾರಿನಿoದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸೈಂಟ್ ತೋಮಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಕಡಲಕೆರೆ ನಿಸರ್ಗಧಾಮದ ಆವರಣದಲ್ಲಿ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಆವರಣದಲ್ಲಿ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ, ಶಂಕರ ಹಾಗೂ ಪುರಸಭಾ ಕಂದಾಯ ಅಧಿಕಾರಿ ಜ್ಯೋತಿ ನೇತೃತ್ವದಲ್ಲಿ. ವಕೀಲೆ ಶ್ವೇತಾ ಜೈನ್ ಅವರ ನೇತೃತ್ವದಲ್ಲಿ ಸ್ವಸ್ತಿಶ್ರೀ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪತಂಜಲಿ ಯೋಗ ಸಮಿತಿ ಮತ್ತು ಅಂಗನವಾಡಿ ಬಾಲಮಿತ್ರ ಸಮಿತಿಯ ಸದಸ್ಯರಿಂದ ಸಾವಿರ ಕಂಬ ಬಸದಿ ಆವರಣದಲ್ಲಿ, ಜ್ಯೋತಿನಗರ ಉದ್ಯಾನವನದ ಬಳಿ ಸ್ವಸಹಾಯ ಗುಂಪಿನ ಸದಸ್ಯರು, ಪೌರಕಾರ್ಮಿಕರು.
ಸ್ವರಾಜ್ಯ ಮೈದಾನ, ರಿಂಗ್ ರೋಡ್ ಹಾಗೂ ಮಾರ್ಕೆಟ್ ಬಳಿ ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ ತಂಡದ ಸದಸ್ಯರು ಮತ್ತು ಪೌರ ಕಾರ್ಮಿಕರು. ಸಮುದಾಯ ಆರೋಗ್ಯ ಕೇಂದ್ರದ ಬಳಿ ಆರೋಗ್ಯ ಕೇಂದ್ರದ ಸಿಬಂದಿಗಳು ಮತ್ತು ಪೌಕಕಾರ್ಮಿಕರು. ಕುಷ್ಟ ರೋಗ ಆಸ್ಪತ್ರೆ ಆವರಣ ಬಳಿ ನೇತಾಜಿ ಬ್ರಿಗೇಡ್ ನ ಸದಸ್ಯರು ಮತ್ತು ಕಾರ್ಮಿಕರು ಹಾಗೂ ಆಳ್ವಾಸ್ ಸಮಾಜಕಾರ್ಯ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಪುರಸಭಾ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಪಿ.ಕೆ.ತೋಮಸ್, ರಾಜೇಶ್ ನಾಯ್ಕ್, ರೂಪಾ ಶೆಟ್ಟಿ, ಶಕುಂತಳಾ ದೇವಾಡಿಗ, ಸೌಮ್ಯ ಶೆಟ್ಟಿ, ಶ್ವೇತಾ ಕುಮಾರಿ ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತರೆ ಶಿಲ್ಪಾ ಈ ಸಂದರ್ಭದಲ್ಲಿದ್ದರು.