ಮುಂಬೈಯಲ್ಲಿ ದೇವಸ್ಥಾನ ಸಂಸ್ಕೃತಿ ರಕ್ಷಣಾಸಭೆ ! ಸರಕಾರವು ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದ ಹಾಗೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ ? – ಪುಷ್ಪೇಂದ್ರ ಕುಲಶ್ರೇಷ್ಠ – ಕಹಳೆ ನ್ಯೂಸ್
ಹಿಂದೂ ಬಾಂಧವರು ಹಿಂದೂ ರಾಷ್ಟ್ರದ ಬೇಡಿಕೆಗಾಗಿ ಸರಕಾರವನ್ನು ಅವಲಂಬಿಸಿಕೊAಡಿದ್ದಾರೆ, ಆದರೆ ಒಂದು ಜನಾಂಗವು ತಮಗೆ ಬೇಕಾದುದೆಲ್ಲವನ್ನೂ ಸರಕಾರದಿಂದ ಮಾಡಿಸಿಕೊಳ್ಳುತ್ತದೆ. ಅಧಿಕಾರದಲ್ಲಿ ಹಿಂದೂಗಳಿದ್ದರು ಕೂಡ ಈ ಜನರ ವಿಚಾರಕ್ಕನುಸಾರವಾಗಿಯೇ ಸರಕಾರ ಕಾರ್ಯಾಚರಿಸುತ್ತದೆ. ನಮ್ಮ ದೇಶವು ಯಾವುದೇ ಭಯೋತ್ಪಾದಕರಿಂದ ನಡೆಸಲ್ಪಡುತ್ತಿಲ್ಲ. ಆದರೂ ಕೂಡ ಅನೇಕ ಬಾರಿ ಹಿಂದೂ ವಿರೋಧಿ ನಿಲುವು ಏಕೆ ತಾಳಲಾಗುತ್ತದೆ ? ದೇವಸ್ಥಾನಗಳ ಸರಕಾರಿಕರಣ ಯಾರು ಮಾಡಿದರು? ದೇವಸ್ಥಾನಗಳ ಹಾಗೆ ಸರಕಾರ ಮಸೀದಿಗಳನ್ನು ಏಕೆ ವಶಪಡಿಸಿಕೊಳ್ಳಲಿಲ್ಲ ? ಎಂದು ಸುಪ್ರಸಿದ್ಧ ವಕ್ತಾರರು ಮತ್ತು ಹಿರಿಯ ಪತ್ರಕರ್ತರಾದ ಶ್ರೀ. ಪುಷ್ಪೇಂದ್ರ ಕುಲಶ್ರೇಷ್ಠ ಇವರು ನೇರ ಪ್ರಶ್ನೆ ಕೇಳಿದರು. ಗೌಡ ಸಾರಸ್ವತ ಬ್ರಾಹ್ಮಣ ಟೆಂಪಲ್ ಟ್ರಸ್ಟ್, ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈಯ ದಾದರನಲ್ಲಿರುವ ಸ್ವಾತಂತ್ರ‍್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ ಭವನದಲ್ಲಿ ಆಯೋಜಿಸಲಾದ ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಕಾರ್ಯಕ್ರಮವು ಶ್ರೀಗಣೇಶನ ಶ್ಲೋಕ, ಶಂಖನಾದ, ವೇದಮಂತ್ರ ಪಠಣ ಮತ್ತು ಗಣ್ಯರಿಂದ ದೀಪ ಪ್ರಜ್ವಲನೆ ಮಾಡಿ ಆರಂಭಿಸಲಾಯಿತು. ವೇದಿಕೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಟೆಂಪಲ್ ಟ್ರಸ್ಟಿನ ಅಧ್ಯಕ್ಷ ಶ್ರೀ ಪ್ರವೀಣ ಕಾನವಿಂದೆ, ಟ್ರಸ್ಟಿನ ಸಚಿವರಾದ ಶ್ರೀ ಶಶಾಂಕ ಗುಳಗುಳೆ, ಮನಸೇಯ ನಾಯಕರಾದ ಶ್ರೀ. ನಿತಿನ ಸರದೇಸಾಯಿ, ಮುಂಬೈಯ ಸರ್ಜನ್ ಡಾ. ಅಮಿತ ತಡಾನಿ, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಸಗಡ ರಾಜ್ಯ ಸಂಘಟಕರಾದ ಶ್ರೀ. ಸುನಿಲ ಘನವಟ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಹಿತ ರಾಷ್ಟ್ರ ಮತ್ತು ಧರ್ಮಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈ ಸಮಯದಲ್ಲಿ ಶ್ರೀ. ಪುಷ್ಪೇಂದ್ರ ಕುಲಶ್ರೇಷ್ಠ ಇವರು ಮಾತು ಮುಂದುವರಿಸುತ್ತಾ, ಕಾಶ್ಮೀರದಿಂದ ಕಾಶ್ಮೀರಿ ಪಂಡಿತರ ಪಲಾಯನವಾಯಿತು, ಇದನ್ನು ಓದಿ ಕೂಡ ನಾವು ಮೌನವಾಗಿ ಕುಳಿತೆವು. ಗಾಜಿಯಾಬಾದಿನಲ್ಲಿ ಅಖಲಾಖನ ಗುಂಪಿನಿAದ ಹತ್ಯೆಗಳು ನಡೆದ ನಂತರ ಜಗತ್ತಿನಾದ್ಯಂತ ಪ್ರತಿಭಟನೆ ನಡೆಸಲಾಯಿತು ; ಆದರೆ ದೇಶದ ಸ್ವಾತಂತ್ರದ ನಂತರ 477 ಹಿಂದೂ ಯುವಕ ಯುವತಿಯರನ್ನು ಗುಂಪುಕಟ್ಟಿ ಕೊಲ್ಲಲಾಯಿತು (ಮಾಬ್ ಲಿಚಿಂಗ್). ಅದರ ಬಗ್ಗೆ ಯಾರೂ ಧ್ವನಿಯೆತ್ತಲಿಲ್ಲ. ದೇಶದಲ್ಲಿ 85 ಕೋಟಿ ಹಿಂದುಗಳಿರುವಾಗಲೂ ಈ ರೀತಿಯ ಘಟನೆಗಳು ನಡೆಯುತ್ತವೆ. ಆದ್ದರಿಂದ ಹಿಂದುತ್ವದ ಹಿತಕ್ಕಾಗಿ ಹಿಂದೂಗಳೇ ಕಾರ್ಯ ಮಾಡುವುದು ಆವಶ್ಯಕವಾಗಿದೆ. ಹಿಂದೂಗಳು ಯಾವ ರೀತಿ ಶಕ್ತಿ ನಿರ್ಮಾಣ ಮಾಡಬೇಕೆಂದರೆ, ಈ ಸರಕಾರ ನಮ್ಮ ಹೇಳಿಕೆಯ ಪ್ರಕಾರ ನಡೆಯಬೇಕು ಎಂದರು.
ಈ ಸಮಯದಲ್ಲಿ ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ಡಾಕ್ಟರ್ ಅಮಿತ್ ತಡಾನಿ ಇವರು ಬರೆದಿರುವ ‘ದಾಬೋಲಕರ್ – ಪಾನಸರೇ ಹತ್ಯೆ : ಸಮೀಕ್ಷೆಯಲ್ಲಿ ನ ರಹಸ್ಯಗಳು’ ಎಂಬ ಮರಾಠಿ ಪುಸ್ತಕವನ್ನು ಗಣ್ಯರಿಂದ ಬಿಡುಗಡೆ ಮಾಡಿಸಲಾಯಿತು. ಈ ಪುಸ್ತಕದಲ್ಲಿ ಮಹಾರಾಷ್ಟ್ರದಲ್ಲಿನ ನಾಸ್ತಿಕವಾದಿಗಳ ದಾರಿತಪ್ಪಿದ ತಪಾಸಣೆಯ ಸಂದರ್ಭದಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಮಾತನಾಡುವುದು ಕಾಣುತ್ತದೆ. ಕಾರ್ಖಾನೆ ಮತ್ತು ಕಸಾಯ ಕಾಖಾಯಿಂದ ಆಗುವ ಮಾಲಿನ್ಯ ತಡೆಯುವದಕ್ಕಾಗಿ ಅವರು ಏನು ಮಾಡಿದ್ದಾರೆ ? ಕಳೆದ 10 – 12 ವರ್ಷಗಳಿಂದ ಕೃತ್ರೀಮ ಟ್ಯಾಂಕುಗಳಿAದ ಮಾಲಿನ್ಯ ಕಡಿಮೆ ಆಗಿದೆ, ಹೇಗೆ ಸರಕಾರ ಅಂಕಿ ಸಂಖ್ಯೆಯ ಸಹಿತ ಬಹಿರಂಗಪಡಿಸುವುದೇ ? ಹಿಂದೂಗಳ ಗಣೇಶೋತ್ಸವ ಮತ್ತು ಇತರ ಹಬ್ಬದಲ್ಲಿ ಮಾಲಿನ್ಯ ನಿರ್ಮಾಣ ಮಾಡುವುದಿಲ್ಲ, ತದ್ವಿರುದ್ಧ ಜೀವನದಲ್ಲಿ ಜ್ಞಾನ ಮತ್ತು ಆನಂದದ ವೃದ್ಧಿ ಮಾಡುತ್ತವೆ. ಗಣೇಶೋತ್ಸವ ಮತ್ತು ಹಿಂದೂಗಳ ಹಬ್ಬ ಉತ್ಸವದಲ್ಲಿ ಮಾಲಿನ್ಯ ಆಗುತ್ತದೆ, ಎಂಬ ಭ್ರಮೆಯಿಂದ ಹಿಂದೂಗಳು ಹೊರಬಂದು ತಮ್ಮ ಹಬ್ಬ ಉತ್ಸವಗಳನ್ನು ಆಚರಿಸಬೇಕು, ಎಂದು ಶ್ರೀ. ಕೋಚರೆಕರ ಇವರು ಕೊನೆಯಲ್ಲಿ ಹೇಳಿದರು.