ಬಂಟ್ವಾಳ : ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ತೋಟದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಉಳ್ಳಾಲ ತಾಲೂಕಿನ ಕುರ್ನಾಡು ಎಂಬಲ್ಲಿ ನಡೆದಿದೆ.
ಕುರ್ನಾಡು ಗ್ರಾಮದ ಹೂವಿನಕೊಪ್ಪಲು ನಿವಾಸಿ ವಿಶ್ವನಾಥ ( 52) ಮೃತಪಟ್ಟ ವ್ಯಕ್ತಿ.
ಅವರು ಚೇಳೂರು ಗ್ರಾಮದ ಬರೆ ಎಂಬಲ್ಲಿ ವಿಠಲ ಬೆಳ್ಚಾಡ ಅವರ ಮನೆಗೆ ಕೂಲಿ ಕೆಲಸಕ್ಕೆಂದು ಹೋಗಿದ್ದರು.
ಅಲ್ಲಿ ಹರಿಶ್ಚಂದ್ರ ಎಂಬವರ ಜೊತೆಯಲ್ಲಿ ಅಡಿಕೆ ತೋಟಕ್ಕೆ ದನದ ಗೊಬ್ಬರವನ್ನು ಹಾಕುತ್ತಿದ್ದರು. ಸಂಜೆ ಸುಮಾರು 5 ಗಂಟೆ ವೇಳೆಗೆ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೆಲಕ್ಕೆ ಕುಸಿದು ಬಿದ್ದು ಮೂರ್ಚೆ ಹೋಗಿದ್ದರು. ಕೂಡಲೇ ಮಂಗಳೂರು ಕಣಚ್ಚೂರು ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಲಾಯಿತಾದರೂ ಅವರು ದಾರಿ ಮಧ್ಯ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ