Tuesday, November 26, 2024
ಸುದ್ದಿ

ಬಂಟ್ವಾಳ ; ಪಂಜಿಕಲ್ಲು ಪರಿಸರದಲ್ಲಿ ಆತಂಕ ಹುಟ್ಟಿಸಿದ್ದ ಕಾಳಿಂಗ ಸರ್ಪ ಹಿಡಿದ ಸ್ಮೇಕ್ ಕಿರಣ್ – ಕಹಳೆ ನ್ಯೂಸ್

ಬಂಟ್ವಾಳ: ಕಳೆದ ಎರಡು ತಿಂಗಳಿನಿoದ ಪಂಜಿಕಲ್ಲು ಪರಿಸರದಲ್ಲಿ ಬೀತಿ ಹುಟ್ಟಿಸಿದ್ದ ಕಾಳಿಂಗ ಸರ್ಪವನ್ನು ಕೊನೆಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ಬAಟ್ವಾಳ ತಾಲೂಕಿನ ಪಂಜಿಕಲ್ ಪ್ರದೇಶದಲ್ಲಿ ಅಲ್ಲಲ್ಲಿ ಭೀತಿ ಹುಟ್ಟಿಸುತ್ತಿದ್ದ ಕಾಳಿಂಗ ಸರ್ಪವನ್ನು ಇಂದು ಸ್ಮೇಕ್ ಕಿರಣ್ ಅವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಜಿಕಲ್ಲು ಗ್ರಾಮದ ಇನಿಲಕೋಡಿ ನಾರಾಯಣ ಬಂಗೇರ ಇವರ ಮನೆಯ ಅಂಗಳದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ರೋಹಿಣಿ ಎಂಬವರು ತೋಟಕ್ಕೆ ಹೋಗಿ ವಾಪಾಸು ಮನೆಗೆ ಬರುವ ಸಂದರ್ಭದಲ್ಲಿ ಇವರಿಗೆ ಗೊತ್ತಿಲ್ಲದಂತೆ ಕಾಳಿಂಗ ಸರ್ಪಕ್ಕೆ ತುಳಿದಿದ್ದರು. ಆದರೆ ಕ್ಷಣಾರ್ಧದಲ್ಲಿ ಗಮನಕ್ಕೆ ಬಂದು ಅಪಾಯದಿಂದ ಪಾರಾಗಿದ್ಧಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ಮನೆಯವರು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕಿರಣ್ ಅವರು ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಹಕಾರದಿಂದ ಕಳಿಂಗ ಸರ್ಪವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಕಾರ್ಯಾಚರಣೆಯಲ್ಲಿ ಸಿರಿಲ್ ಆಚಾರಿಪಾಲಿಕೆ, ಧೀರಜ್ ನಾವುರ,ಅರಣ್ಯ ಸಿಬ್ಬಂದಿ ಸ್ಮಿತಾ ಹಾಗೂ ಜಯರಾಮ್ ಸಹಕರಿಸಿದ್ದಾರೆ.

ಕಳೆದ ಎಂಟು ವರ್ಷಗಳ ಹಿಂದೆ ಬಿಸಿರೋಡಿನ ಹರಿಕೃಷ್ಣ ಬಂಟ್ವಾಳ ಅವರ ಮನೆಯಲ್ಲಿ ಕಾಳಿಂಗ ಸರ್ಪ ಹಾವು ಕಂಡು ಬಂದಿತ್ತು. ಆ ಸಂದರ್ಭದಲ್ಲಿ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಇದೀಗ ಎರಡನೇ ಬಾರಿ ಬಂಟ್ವಾಳದಲ್ಲಿ ಕಾಳಿಂಗ ಸರ್ಪ ಕಾಣಸಿಕ್ಕಿದ್ದು, ಎರಡು ತಿಂಗಳಿನಿAದ ಗ್ರಾಮದ ಜನರ ನಿದ್ದೆಗೆಡಿಸಿತ್ತು. ಬೃಹತ್ ಗಾತ್ರದಕಾಳಿಂಗ ಸರ್ಪದ ಓಡಾಟ ಭಯ ಹುಟ್ಟಿಸಿತ್ತು. ಇದೀಗ ಜನ ಕೊಂಚ ನೆಮ್ಮದಿಯಿಂದ ಇದ್ದಾರೆ.