ಬಂಟ್ವಾಳ : ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ ಇಲ್ಲಿ ಜರುಗಿದ ಗಾಂಧೀ ಜಯಂತಿ ದಿನಾಚರಣೆಯ ಸಂದರ್ಭದಲ್ಲಿ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ರಾಜೇಶ್ ನಾಯ್ಕ ಉಳಿಪ್ಪಾಡಿಯವರು ವಿಶೇಷ ಚೇತನ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಮುಖ್ಯ ವಾಹಿನಿಯಿಂದ ಹಿಂದೆ ಉಳಿಸದೆ, ಎಲ್ಲಾ ಸೌಕರ್ಯಗಳನ್ನು ಒದಗಿಸಿ ಹಾಗೂ ಆ ವಿದ್ಯಾರ್ಥಿಗಳ ವೈದ್ಯಕೀಯ ಸೌಲಭ್ಯಗಳ ಅಗತ್ಯತೆಯನ್ನು ಗಮನಕ್ಕೆ ತಂದರೆ ಉಚಿತವಾಗಿ ಮಾಡಿಸಲಾಗುವುದಾಗಿ ತಿಳಿಸಿದರು.
ಹಾಗೂ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿಯವರಾದ ಶ್ರೀ ರಾಘವೇಂದ್ರ ಬಲ್ಲಾಳ್ ಕೆ ಎಸ್ ರವರು ವಿಶೇಷ ಚೇತನ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಇಂತಹ ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಅಗತ್ಯತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿಯವರಾದ ಶ್ರೀ ಡಾ| ಅವಿನಾಶ್ ಮತ್ತು ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲ|| ಪ್ರಶಾಂತ್ ಕೋಟ್ಯಾನ್ ಹಾಗೂ ಸದಸ್ಯರಾದ ಲ|| ಸತ್ಯನಾರಾಯಣ ರಾವ್ ರವರು ಉಪಸ್ಥಿತರಿದ್ದರು.