Recent Posts

Sunday, January 19, 2025
ಸುದ್ದಿ

ವಿಧಾನಸಭೆ ಉಪಚುನಾವಣೆ: ಬಿ ಫಾರಂ ಗೆ ವಿಶೇಷ ಪೂಜೆ ಸಲ್ಲಿಸಿದ ಎಚ್‌ಡಿ ರೇವಣ್ಣ – ಕಹಳೆ ನ್ಯೂಸ್

ಬೆಂಗಳೂರು, ಅಕ್ಟೋಬರ್ 11: ವಿಧಾನಸಭೆ ಉಪಚುನಾವಣೆಗೆ ರಾಮನಗರದಿಂದ ನಾಮಪತ್ರ ಸಲ್ಲಿಸಲಿರುವ ಅನಿತಾ ಕುಮಾರಸ್ವಾಮಿ ಅವರ ಬಿ ಫಾರಂಗೆ ಸಚಿವ ಎಚ್‌ಡಿ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು.

ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗೆ ಸಜ್ಜಾಗಿರುವ ದಳಪತಿಗಳು ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ, ಬಿ ಫಾರಂ ಕೂಡ ಇದ್ಧಪಡಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವ ಸಚಿವ ಎಚ್‌ಡಿ ರೇವಣ್ಣ ರಾಮನಗರದಿಂದ ನಾಮಪತ್ರ ಸಲ್ಲಿಸಲಿರುವ ಅನಿತಾ ಕುಮಾರಸ್ವಾಮಿ ಅವರ ಬಿ ಫಾರಂಗೆ ಪೂಜೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನವರಾತ್ರಿ ಮೊದಲ ದಿನ ಶುಭ ಎಂದು ಭಾವಿಸಿರುವ ರೇವಣ್ಣ ಪೂಜೆ ಸಲ್ಲಿಸಿದರು. ರಾಮನಗರ ಮತ್ತು ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ತಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಲಿ ಎಂದು ದೇವರಲ್ಲಿ ಮೊರೆ ಹೋದರು. ರೇವಣ್ಣ ಅವರಿಗೆ ಪಕ್ಷದ ಕೆಲವು ನಾಯಕರು ಜೊತೆಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೇವಣ್ಣ ಅವರು ವಿಧಾನಸಭಾ ಚುನಾವಣೆ ವೇಳೆ ಸಹ ಬಿ ಫಾರಂ ಗಳನ್ನು ತಿರುಪತಿಗೆ ಕೊಂಡೊಯ್ದು ವಿಶೇಷ ಪೂಜೆ ನೆರವೇರಿಸಿದ್ದರು. ಪ್ರತಿ ಚುನಾವಣೆಯಲ್ಲೂ ತಮ್ಮ ಅಭ್ಯರ್ಥಿಗಳ ಜಯಕ್ಕಾಗಿ ಬಿ ಫಾರಂಗಳಿಗೆ ವಿಶೇಷ ಪೂಜೆ ಮಾಡಿಸುತ್ತಾರೆ. ಹಾಗೆಯೇ ಈ ಬಾರಿಯೂ ಲೋಕಸಭೆ ಮತ್ತು ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿ ಎಂದು ಪೂಜೆ ಸಲ್ಲಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.