ಬಂಟ್ವಾಳ : ಪಾಣೆಮಂಗಳೂರು ಸೇತುವೆಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮವಾಗಿ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾದ ಘಟನೆ ಅ.2 ರಂದು ಸೋಮವಾರ ಮಧ್ಯಾಹ್ನ ವೇಳೆ ನಡೆದಿದೆ.
ಲಾರಿಯ ಟಯರ್ ಬ್ಲಾಸ್ಟ್ ಗೊಂಡ ಕಾರಣ ನೇತ್ರಾವತಿ ಸೇತುವೆ ಮಧ್ಯ ಭಾಗದಲ್ಲಿ ಲಾರಿ ಬಾಕಿಯಾಗಿತ್ತು.
ಹಾಗಾಗಿ ಸೇತುವೆ ಉದ್ದಕ್ಕೂ ವಾಹನಗಳು ಸಾಲು ಗಟ್ಟಿ ನಿಂತಿತ್ತು. ಬಳಿಕ ಟ್ರಾಫಿಕ್ ಎಸ್.ಐ.ಸುತೇಶ್ ಅವರು ಕ್ರೇನ್ ತರಿಸಿ ಲಾರಿಯನ್ನು ಸೇತುವೆಯಿಂದ ಇನ್ನೊಂದು ಬದಿಗೆ ಎಳೆದು ತರಲಾಯಿತು ಎಂದು ತಿಳಿದು ಬಂದಿದೆ.