ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಅಕ್ಟೋcಬರ್ 2 ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಬಹಳ ವಿಭಿನ್ನ ರೀತಿ ಯಲ್ಲಿ ಆಚರಿಸಲಾಯಿತು. ವಿಶೇಷವಾಗಿ ಗಾಂಧೀಜಿಯವರ 154ನೇ ಜನ್ಮದಿನದ ಅಂಗವಾಗಿ 154 ದೀಪಗಳನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಒದಗಿಸಲಾಯಿತು. ವಿದ್ಯಾರ್ಥಿಗಳು ಭಜನೆ ಹಾಗೂ ಭಾಷಣ ನೆರವೇರಿಸಿದರು ಹಾಗೂ ಕಟಪಾಡಿ ಗ್ರಾಮ ದ ಸುತ್ತ ನೂರಾರು ವಿದ್ಯಾರ್ಥಿಗಳು ಸ್ವಚ್ಛತೆಯ ನ್ನು ನಡೆಸಿ ಕೊಟ್ಟರು.
ಸ್ವಚ್ಛತೆ ಅನಿವಾರ್ಯತೆ, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ವಸ್ತು ಗಳಿಂದ ಆಗುವ ಅರೋಗ್ಯ ಹಾಗೂ ಸಮಾಜ ದ ಮೇಲೆ ಆಗುವ ದುಷ್ಪರಿಣಾಮ ನಾವು ಮನುಷ್ಯ ರಾಗಿ ನಿರ್ವಹಿಸ ಬೇಕಾ ದ ಜಾಗೃತಿ ಕುರಿತಾಗಿ ಬೀದಿ ನಾಟಕಗಳನ್ನು ತ್ರಿಶಾ ವಿದ್ಯಾ ಕಾಲೇಜಿನ ಆವರಣದಲ್ಲಿ ಮತ್ತು ಕಟಪಾಡಿಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಮಕ್ಷಮದಲ್ಲಿ ಅಭಿನಯಿಸಿದರು ವಿದ್ಯಾರ್ಥಿ ಗಳನ್ನು ಪಂಚಾಯತ್ Unlimited ಮತ್ತು ಸದಸ್ಯರು ಅಭಿನಂದಿಸಿ ದರು,. ಮತ್ತು ಕಾಲೇಜಿನ ಎನ್.ಎನ್.ಎಸ್. ಸಂಸ್ಥೆ ವತಿಯಿಂದ ಸ್ವಚ್ಛ ತಾ ಹಾಗೂ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಸಿ ಕೊಡಲಾಯಿತು.