Recent Posts

Sunday, January 19, 2025
ಸುದ್ದಿ

ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ – ಕಹಳೆ ನ್ಯೂಸ್

ಮಂಗಳೂರು: ಕೆಲಸಕ್ಕೆಂದು ಹೋದ ಪತ್ನಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಪತಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ. ಬಿಸಿರೋಡಿನ ಬಿ. ಮೂಡ ಗ್ರಾಮದ ಕೊಡಕಲ್ ನಿವಾಸಿ ನಾರಾಯಣ ಪೂಜಾರಿ ಅವರ ಪತ್ನಿ ಸವಿತಾ ಕಾಣೆಯಾದ ಮಹಿಳೆ ಎಂದು ಶಂಕಿಸಲಾಗಿದೆ.

ಈ ದಂಪತಿಗಳಿಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿದೆ ಆದರೆ ಮಕ್ಕಳಾಗಿಲ್ಲ. ಎಂದಿನಂತೆ ಇಡ್ಲಿ ಮಾರಾಟ ಮಾಡಲೆಂದು ಪುತ್ತೂರಿಗೆ ಹೋಗುತ್ತೇನೆ ಎಂದು ಮನೆಯಿಂದ ಹೋದವರು ಮತ್ತೆ ವಾಪಾಸು ಬಂದಿಲ್ಲ. ಮನೆಯಿಂದ ಹೊರಟು ಹೋಗುವಾಗ ಆಧಾರ್ ಕಾರ್ಡು, ಸರ್ಟಿಫಿಕೇಟ್ ಹಾಗೂ ಬಟ್ಟೆಬರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು