ಬೀದರ್: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ (ಅ.3) ನಗರದ ವಾಯುಸೇನೆ ತರಬೇತಿ ಕೇಂದ್ರಕ್ಕೆ ಆಗಮಿಸಲಿದ್ದಾರೆ.
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ನಗರದ ವಾಯುಸೇನೆ ತರಬೇತಿ ಕೇಂದ್ರ ಹಾಗೂ ಬೀದರ್ ನಗರದ ಸುತ್ತಮುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ ಅ.3ರಂದು ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಸಾರ್ವಜನಿಕರು ಡ್ರೋನ್ ಹಾರಿಸದಂತೆ ನಿμÉೀಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೋದಿ ಅವರು ತೆಲಂಗಾಣದ ನಿಜಾಮಾಬಾದ್ಗೆ ತೆರಳುವ ಮಾರ್ಗಮಧ್ಯೆ ನಗರದ ವಾಯುಸೇನೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡುವರು. ಮಧ್ಯಾಹ್ನ 1ಕ್ಕೆ ಛತ್ತೀಸಗಢದ ಜಗದಾಲಪುರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 1.50ಕ್ಕೆ ನಗರಕ್ಕೆ ಆಗಮಿಸುವ ಅವರು, ಇಲ್ಲಿಂದ 2.15ಕ್ಕೆ ಸೇನಾ ಹೆಲಿಕಾಪ್ಟರ್ನಲ್ಲಿ ನಿಜಾಮಾಬಾದ್ಗೆ ಪ್ರಯಾಣಿಸುವರು. ಅಲ್ಲಿಂದ ಸಂಜೆ 5.50ಕ್ಕೆ ಹೊರಟು ಸಂಜೆ 5.55ಕ್ಕೆ ವಾಯುನೆಲೆಗೆ ಬಂದು, ಅಲ್ಲಿಂದ ವಿಶೇಷ ವಿಮಾನದಲ್ಲಿ ನವದೆಹಲಿಗೆ ಪಯಣ ಬೆಳೆಸುವರು. ಸಂಜೆ ವಿಮಾನ ಹತ್ತುವುದಕ್ಕೂ ಮುನ್ನ ಸ್ಥಳೀಯ ಮುಖಂಡರೊಂದಿಗೆ ಕೆಲ ಕಾಲ ಚರ್ಚಿಸುವರು ಎಂದು ತಿಳಿದುಬಂದಿದೆ.