Thursday, November 28, 2024
ಸುದ್ದಿ

ಸ್ಪೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ – ಕಹಳೆ ನ್ಯೂಸ್

ಮೂಡುಬಿದಿರೆ : ಗಾಂಧಿ ಜಯಂತಿ ಹಾಗೂ ಸ್ವಚ್ಛ ಭಾರತ್ ಅಭಿಯಾನದಂಗವಾಗಿ ಪುರಸಭೆಯ ನೇತೃತ್ವದಲ್ಲಿ ಇಲ್ಲಿನ ಅರಮನೆಬಾಗಿಲು ಬಳಿ ಇರುವ ಸ್ಪೂರ್ತಿ ಭಿನ್ನ ಸಾಮಥ್ಯದ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಸ್ವರಾಜ್ಯ ಮೈದಾನದಿಂದ ವೆಂಕಟರಮಣ ದೇವಸ್ಥಾನದ ವರೆಗೆ ಜನ ಜಾಗೃತಿ ಜಾಥಾ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಮೂಡುಬಿದಿರೆ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಪುರಸಭಾ ಮುಖ್ಯಾಧಿಕಾರಿ ಜಾಥಾಕ್ಕೆ ಚಾಲನೆಯನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಸರ ಅಭಿಯಂತರೆ ಶಿಲ್ಪಾ, ಶಾಲಾ ಮುಖ್ಯಸ್ಥ ಪ್ರಕಾಶ್ ಜೆ.ಶೆಟ್ಟಿಗಾರ್, ಪೋಷಕರ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್, ಉಷಾಲತಾ, ಸದಾಶಿವ ಶೆಟ್ಟಿಗಾರ್, ಕುಮಾರ್ ಹಾಗೂ ಮಕ್ಕಳ ಪೋಷಕರು, ಮುಖ್ಯ ಶಿಕ್ಷಕಿ ಮತ್ತು ಸಿಬಂದಿಗಳು ಜಾಥಾದಲ್ಲಿ ಪಾಲ್ಹೊಂಡಿದ್ದರು.

ಜಾಥಾದಲ್ಲಿ ” ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ತ್ಯಜಿಸಿ ಮರುಬಳಕೆಯ ಬಟ್ಟೆ ಚೀಲಗಳನ್ನು ಬಳಸಿ”, ಪ್ಲಾಸ್ಟಿಕ್ ಬಳಸುವುದನ್ನು ತಪ್ಪಿಸಿ ನಮ್ಮ ವೈವಿದ್ಯತೆಗಳನ್ನು ಕಾಪಾಡಿ”, ” ನೆಲ ಮಾಲಿನ್ಯದಿಂದ ಸಂಪತ್ತು ನಾಶ”, ” ವಾಯು ಮಾಲಿನ್ಯದಿಂದ ಪರಿಸರ ನಾಶ”, “ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ”, ಎಂಬ ಘೋಷಣೆಯ ನಾಮ ಫಲಕಗಳನ್ನು ವಿದ್ಯಾರ್ಥಿಗಳು ಜಾಥಾದಲ್ಲಿ ಪ್ರದರ್ಶಿಸಿದರು.