Friday, September 20, 2024
ಸುದ್ದಿ

ಪುತ್ತೂರು ಯಕ್ಷರಂಗದಿಂದ ಚಿಟ್ಟಾಣಿಯವರಿಗೆ ನುಡಿನಮನ.

ಪುತ್ತೂರು : ಯಕ್ಷರಂಗ ಪುತ್ತೂರು ಇದರ ವತಿಯಿಂದ ಪ್ರಖ್ಯಾತ ಯಕ್ಷಗಾನ ಕಲಾವಿದ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಅವರಿಗೆ ನುಡಿ ನಮನ 

ಯಕ್ಷರಂಗದ ಅಧ್ಯಕ್ಷರು ಶ್ರೀ ಕಾಡೂರು ಸೀತಾರಾಮ. ಶಾಸ್ತ್ರಿಗಳು ಸ್ವಾಗತಿಸಿದರು
ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಯವರೊಂದಿಗೆ ಎರಡು ವರ್ಷಗಳ ಕಾಲ ತಿರುಗಾಟ ಮಾಡಿ ಅನುಭವ ಹೊಂದಿದ್ದ ಪುತ್ತೂರಿನ ಹಿರಿಯರು ಯಕ್ಷಗಾನದ ಹೆಸರಾಂತ ಹಾಸ್ಯಗಾರ ಪೆರ್ವೋಡಿ ಶ್ರೀ ನಾರಾಯಣ ಭಟ್ ಅವರು ತಮ್ಮ ಎರಡು ವರ್ಷದ ಚಿಟ್ಟಾಣಿ ಅವರೊಂದಿಗಿನ ತಿರುಗಾಟದ ಬಗ್ಗೆ ಮಾಹಿತಿ ನೀಡಿದರು ಶರಾವತಿ ನದಿಯ ಒಂದು ಭಾಗ ಸಭಾಹಿತ ಪದ್ಧತಿಯನ್ನು ಯಕ್ಷಗಾನದಲ್ಲಿ ಅಳವಡಿಸಿಕೊಂಡಿತ್ತು ಕೆರೆಮನೆ ಬಳಗ ಅವರೊಂದು ಪದ್ಧತಿಯನ್ನು ಅಳವಡಿಸಿಕೊಂಡು ಯಕ್ಷ ಬೇಸಾಯ ಮಾಡುತ್ತಿದ್ದರು.ಹೊನ್ನಾವರ ಶರಾವತಿ ನದಿಗೆ ಸೇತುವೆ ಯಾದ ನಂತರ ಎರಡು ತಟಗಳ ಸಂಪರ್ಕದಿಂದ ಜನರು ಅತ್ತಿತ್ತ ಸಂಪರ್ಕ ಆರಂಭವಾಯಿತು. ಆ ಕಾಲದ ಹೆಸರಾಂತ ಹಾಸ್ಯಗಾರ ಪಾರಮ್ಯ ಹಾಸ್ಯಗಾರರ ಅಭಿನಯ ಚಿಟ್ಟಾಣಿ ಅವರಲ್ಲಿ ಕಂಡು ಬಂತು.ಚಿಟ್ಟಾಣಿ ಅವರು ಅಭಿನಯದಲ್ಲಿ ನಿಪುಣರಾಗಿದ್ದರು ವೇಷಕ್ಕೆ ತಕ್ಕುದಾದ ಮಾತುಗಾರಿಕೆ ದುಷ್ಟ ಬುದ್ಧಿಯ ಪಾತ್ರದೊಂದಿಗೆ ನಾರಾಯಣ ಭಟ್ಟರು ಹಾಸ್ಯ ಪಾತ್ರವನ್ನು ಮಾಡುತ್ತಿದ್ದರೂ ಕಾಡ ಕಿರಾತನ ಬೇಟಿ ಸನ್ನಿವೇಶದಲ್ಲಿ ನಾವು ಉಪವಾಸ ವಿದ್ದೇವೆ ಇಂದು ಏಕಾದಶಿ ಎಂದು ಹೇಳಿದಾಗ ಅವರ ಮುಖದ ಅಭಿನಯ ಜನರ ಮನಮುಟ್ಟಿತು. ಅವರು ಯಕ್ಷಗಾನದಲ್ಲಿ ಬೆಳವಣಿಗೆ ಕಾಣಲು ಮುಖ್ಯ ಕಾರಣ ಗುಂಡುಬಾಳ ಪ್ರದೇಶ ಆ ಪ್ರದೇಶದಲ್ಲಿ ವರ್ಷವಿಡೀ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿತ್ತು ಅಲ್ಲಿ ಕಡತೋಕ ಭಾಗವತರ ಹಾಡುಗಾರಿಕೆ ಆನಂತರ ಟೆಂಟಿನ ಆಟದಲ್ಲಿ ಚಿಟ್ಟಾಣಿ ಅವರು ಹೆಸರುವಾಸಿ ಆದರು.ಅವರ ನುಡಿ ತುಂಬಾ ಕಡೆ ಕಡೆ ಆಗಿತ್ತು ಅದ್ಭುತ ಕಲಾಕಾರ ವ್ಯಕ್ತಿಯ ಘನತೆ ಅವರ ಮರಣದಲ್ಲಿ ನೋಡಬೇಕು ಎಂಬ ನುಡಿಯಂತೆ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರ ಕೊನೆ ಯಾತ್ರೆಯಲ್ಲಿ ಹಲವಾರು ಕಡೆ ಪುಷ್ಪ ಸಮರ್ಪಣೆ ಗೌರವ ಸಮರ್ಪಣೆ ಸರಕಾರಿ ಗೌರವ ಈವರೆಗೂ ಯಾವೊಬ್ಬ ಕಲಾವಿದನಿಗೂ ಸಿಕ್ಕಿರುವುದಿಲ್ಲ ಶ್ರೀಯುತರಿಗೆ ಭಗವಂತನ್ನು ಸಾಯುಜ್ಯ ನೀಡಲಿ ಅವರ ಕುಟುಂಬಕ್ಕೆ ಅವರ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಸರ್ವಶಕ್ತನು ನೀಡಲಿ ಅವರ ಮಗ ಮೊಮ್ಮಗ ಮತ್ತು ಕುಟುಂಬಸ್ಥರು ಯಕ್ಷಗಾನದಲ್ಲಿ ಮುಂದುವರಿದು ಯಕ್ಷಮಾತೆಯ ಸೇವೆಯ ಕೈಂಕರ್ಯದಲ್ಲಿ ತೊಡಗಲಿ ಎಂದು ಹೇಳುತ್ತಾ ಅವರೊಂದಿಗಿನ ತಿರುಗಾಟವು ಅವರಿಗೆ ನಾರಾಯಣ ಭಟ್ಟರಿಗೆ ಅವಿಸ್ಮರಣೀಯವಾಗಿತ್ತು ಎಂದು ಸವಿ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ಯಕ್ಷರಂಗ ಪುತ್ತೂರು ಇದರ ಇತರ ಸದಸ್ಯರು ಮೃತರಿಗೆ ನುಡಿನಮನ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಶ್ರೀ ವಿಜಿ ಭಟ್ಟರು ಚಿಟ್ಟಾಣಿಯವರ ಪ್ರತಿ ಯಕ್ಷಗಾನ ಕಾರ್ಯಕ್ರಮದಲ್ಲಿ ವಿನೂತನ ಹೆಜ್ಜೆಯನ್ನು ಆವಿಷ್ಕಾರ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದರು ಹಾಗೂ ವಂದನಾರ್ಪಣೆಗೈದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ವಿ.ಜಿ. ಭಟ್,ಪುತ್ತೂರು

ಜಾಹೀರಾತು

Leave a Response