ಮಂಗಳೂರು : ಬ್ಯಾಂಕುಗಳಲ್ಲಿ 2ಸಾವಿರ ನೋಟು ವಿನಿಮಯಕ್ಕೆ ಅ.7ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಲಾವಕಾಶ ವಿಸ್ತರಣೆ ಮಾಡಿದ್ದು, ಈ ಹಿಂದಿನ ಆದೇಶದಲ್ಲಿ ಸೆ.30ರವರೆಗೆ ಅವಕಾಶ ನೀಡಲಾಗಿತ್ತು.
2016ರ ನಗದು ಅಮಾನ್ಯೀಕರಣ ಪ್ರಕ್ರಿಯೆಯ ಬಳಿಕ ಭಾರತದಲ್ಲಿ 2000 ರೂ. ಗಳ ನೋಟು ಚಾಲನೆಗೆ ಬಂದಿತ್ತು. 2ಸಾವಿರ ನೋಟುಗಳ ವಿನಿಮಯಕ್ಕೆ ಇನ್ನು 4 ದಿನಗಳು ಬಾಕಿ ಉಳಿದಿದ್ದು, ಕಾಲಾವಕಾಶವನ್ನು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.