ಮಂಗಳೂರು: ಮಂಗಳೂರಿನ ಯುವತಿಯೊಬ್ಬಳು ಆರು ತಿಂಗಳ ಅವಧಿಯಲ್ಲಿ ಥಾಯ್ಲೆಂಡ್‍ನಲ್ಲಿ ನಡೆದ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್‍ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ.
ಮಂಗಳೂರಿನ ಸುರತ್ಕಲ್‍ನ ಕುಳಾಯಿಯ ಹೊನ್ನಕಟ್ಟೆಯ ಯಶಸ್ವಿನಿ ದೇವಾಡಿಗ ಗೋವಿಂದದಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಚಿಕ್ಕಂದಿನಿಂದಲೂ ಮಂಗಳೂರಿನ ಚೆಲುವೆ ಐಶ್ವರ್ಯ ರೈ ಸೇರಿದಂತೆ ಮಾಡೆಲಿಂಗ್‍ನಲ್ಲಿ ಸಾಧನೆ ಮಾಡಿದವರನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಯಶಸ್ವಿನಿ ದೇವಾಡಿಗ ಯಾವತ್ತೂ ಈ ಫೀಲ್ಡ್‍ಗೆ ಬಂದವರಲ್ಲ. ಆದರೆ, ಪ್ರಥಮ ಪಿಯುಸಿ ಮುಗಿದು ರಜೆಯ ಸಂದರ್ಭದಲ್ಲಿ ಮಿಸೆಸ್ ಟೀನ್ ಮಂಗಳೂರು ಸ್ಪರ್ಧೆಯ ವಿವರ ನೋಡಿದ ಅವರು ಆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
ಆ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್ ಅಫ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಬಳಿಕ ಹೈದರಾಬಾದ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಕಿರೀಟ ಮುಡಿಗೇರಿಸಿದ್ದರು. ಅಲ್ಲಿಂದ ವಿಶ್ವ ಮಟ್ಟಕ್ಕೆ ಆಯ್ಕೆಯಾಗಿ ಮಿಸ್ಟರ್ ಮತ್ತು ಮಿಸ್ ಟೀನ್ ಸೂಪರ್ ಗ್ಲೋಬ್ ಜೂನಿಯರ್ ಮಾಡೆಲ್ ಇಂಟರ್‍ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗಿಯಾಗಿ ಕಿರೀಟ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯ 15 ರಿಂದ 19 ವರ್ಷದೊಳಗಿನ ಕೆಟಗರಿಯಲ್ಲಿ ಅವರು ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸ್ಪರ್ಧೆಗೆ 15ಕ್ಕೂ ಅಧಿಕ ದೇಶಗಳಿಂದ 50ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧಾರ್ಥಿಗಳಿದ್ದರು. ನಾಲ್ಕು ದಿನಗಳಲ್ಲಿ ಈ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳು ಅವರವರ ದೇಶದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಪ್ರದರ್ಶಿಸಿದ್ದರು. ಜೊತೆಗೆ ಸಾಂಪ್ರದಾಯಿಕ ಆಹಾರವನ್ನು ಪ್ರದರ್ಶಿಸಬೇಕಿತ್ತು. ಜೊತೆಗೆ ತಮ್ಮಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಬೇಕಿತ್ತು. ನಾಲ್ಕನೇ ದಿನ ಫೈನಲ್ ಹಂತದ ಸ್ಪರ್ಧೆ ನಡೆದಿತ್ತು.
ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದ ಯಶಸ್ವಿನಿ ದೇವಾಡಿಗ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್‍ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ. ಮಂಗಳೂರಿನ ಕುಳಾಯಿ ನಿವಾಸಿಯಾಗಿರುವ ಯಶಸ್ವಿನಿ ದೇವಾಡಿಗ ದೇವದಾಸ ದೇವಾಡಿಗ – ಮೀನಾಕ್ಷಿ ದೇವಾಡಿಗ ದಂಪತಿಯ ಪುತ್ರಿ. ಇವರು ಸುರತ್ಕಲ್ ಗೋವಿಂದದಾಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.
ಯಶಸ್ವಿನಿ ದೇವಾಡಿಗ ಹೇಳುವುದಿಷ್ಟು: ಮಿಸ್ಟರ್ ಮತ್ತು ಮಿಸ್ ಟೀನ್ ಸೂಪರ್ ಗ್ಲೋಬ್ ಜೂನಿಯರ್ ಮಾಡೆಲ್ ಇಂಟರ್‍ನ್ಯಾಷನಲ್ ಸ್ಪರ್ಧೆಯಲ್ಲಿ ಮೊದಲ ದಿನ 15 ವಿವಿಧ ದೇಶಗಳ 50 ಸ್ಪರ್ಧಿಗಳ ಜೊತೆಗೆ, ತೀರ್ಪುಗಾರರು ಮತ್ತು ನಿರ್ದೇಶಕರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿದರೆ, ಎರಡನೆ ದಿನದಲ್ಲಿನ ಪರಿಚಯದ ಭಾಗವಾಗಿ ಸಫಾರಿ ಪ್ರಪಂಚದ ಪ್ರವಾಸವಿತ್ತು. ಅದೇ ದಿನ ಪರಿಚಯ ಮತ್ತು ಸಂದರ್ಶನದ ಸುತ್ತಿನ ರಾಷ್ಟ್ರೀಯ ಪ್ರದರ್ಶನವನ್ನು ನಡೆಸಲಾಯಿತು. ಅಲ್ಲಿ ಭಾಗವಹಿಸುವವರೆಲ್ಲರೂ ಆಯಾ ದೇಶಗಳ ಅವರ ಸಂಪ್ರದಾಯ ಮತ್ತು ಸಂಸ್ಕøತಿಗೆ ಅನುಗುಣವಾಗಿ ಉಡುಗೆ ತೊಟ್ಟು ಮತ್ತು ವಿವಿಧ ದೇಶಗಳ ಎಲ್ಲ ಸ್ಪರ್ಧಿಗಳು ಪ್ರದರ್ಶನದಲ್ಲಿ ಪ್ರಸ್ತುತಪಡಿಸಲು ಆಯಾ ದೇಶಗಳ ಪ್ರಸಿದ್ಧ ಆಹಾರಗಳನ್ನು ತರಬೇಕಾಗಿತ್ತು. 3ನೇ ದಿನ ಟ್ಯಾಲೆಂಟ್ ಸುತ್ತಿನ ಜೊತೆಗೆ ಗ್ರೂಮಿಂಗ್ ಸೆಷನ್‍ಗಳು ನಡೆದವು. ಅಲ್ಲಿ ಭಾಗವಹಿಸಿದವರೆಲ್ಲರೂ ತಮ್ಮ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದರು. 4ನೇ ದಿನದ ಫೈನಲ್ ರಾಷ್ಟ್ರೀಯ ವೇಷಭೂಷಣ ಸುತ್ತು ಮತ್ತು ಸಂಜೆ ಗೌನ್ ಸುತ್ತು ಇತ್ತು ಎಂದರು.
ಎಲ್ಲ ತೀರ್ಪುಗಳ ನಂತರ ಮಿಸ್ ಯಶಸ್ವಿನಿ ದೇವಾಡಿಗ ಕುಳಾಯಿ ಅವರು ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್‍ನ್ಯಾಷನಲ್ 2023 ಕಿರೀಟ ಮುಡಿಗೇರಿಸಿಕೊಂಡರು. 16 ವರ್ಷ ವಯಸ್ಸಿನ ಯಶಸ್ವಿನಿ ದೇವಾಡಿಗ ಅವರಿಗೆ ಇನ್ನು 18 ವರ್ಷದ ಬಳಿಕವμÉ್ಟ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಮಿಸ್ ಇಂಡಿಯಾ, ಮಿಸ್ ಯುನಿವರ್ಸ್ ಮಿಸ್ ವಲ್ರ್ಡ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದ್ದು ಆ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದಾರೆ.