Tuesday, November 26, 2024
ಸುದ್ದಿ

ಅ.14ರಿಂದ ಅ.23ರವರೆಗೆ ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ನವರಾತ್ರಿ ಪೂಜೆ ಹಾಗೂ ಮಾರ್ನೆಮಿ ನೇಮೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ಅ.14ರಿಂದ ಅ.23ರವರೆಗೆ ಬರಿಮಾರು ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಪರಿವಾರ ದೈವಗಳಿಗೆ ನವರಾತ್ರಿ ಪೂಜೆ ಹಾಗೂ ಮಾರ್ನೆಮಿ ನೇಮೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ.14 ರಿಂದ ಅ.22 ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ ನೇತೃತ್ವದಲ್ಲಿ, ಬರಿಮಾರು ಗೋಪುಕೋಡಿ ಶ್ರೀ ವಿನಾಯಕ ಶ್ರೀದೇವಿ ಭಜನಾ ಮಂಡಳಿ ಸಹಭಾಗಿತ್ವದಲ್ಲಿ ಭಜನಾ ಸೇವೆ ಹಾಗೂ ವ್ಯವಸ್ಥಾಪನಾ ಸಮಿತಿ ವತಿಯಿಂದ ನವರಾತ್ರಿ ಪೂಜೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅ.20ರಂದು ಬೆಳಗ್ಗೆ 9.00ರಿಂದ ತೆನೆ ಹಬ್ಬ ಕಾರ್ಯಕ್ರಮ, ಅ.21, 22 ಮತ್ತು 23ರಂದು ರಾತ್ರಿ 8.30ರಿಂದ ಪಲ್ಲಕಿ ಉತ್ಸವ ಸೇವೆ, ರಾತ್ರಿ 9.00ರಿಂದ ಅನ್ನಸಂತರ್ಪಣೆ ನಡೆಯಲಿದ್ದು, ಅ.23ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ ನೇತೃತ್ವದಲ್ಲಿ ಅಲೈತ್ತಿಮಾರು ಬಾವ ಮನೆತನದವರಿಂದ ಭಜನಾ ಸೇವೆ, ಹಾಗೂ ಬೆಳಿಗ್ಗೆ 10.00ರಿಂದ ಆಯುಧ ಪೂಜೆ, ವಿಶೇಷ ಹೂವಿನ ಪೂಜೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ 7.30ರಿಂದ ಪಲ್ಲಕ್ಕಿ ಉತ್ಸವ ಸೇವೆ ನಡೆದು ಬಳಿಕ ರಾತ್ರಿ 10.00ರಿಂದ ಬರಿಮಾರು ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಪರಿವಾರ ದೈವಗಳಿಗೆ ನವರಾತ್ರಿ ಪೂಜೆ ಹಾಗೂ ಮಾರ್ನೆಮಿ ನೇಮೋತ್ಸವ ನಡೆಯಲಿದೆ. ತದನಂತರ ಮಾರ್ನೆಮಿ ಗದ್ದಿಗೆ ವಿಸರ್ಜನೆ ಹಾಗೂ ಪರ್ವ ಸೇವೆ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ವೈದಿಕ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತಾದಿಗಳು ಭಾಗವಹಿಸಿ, ದೈವದ ಕೃಪೆಗೆ ಪಾತ್ರರಾಗಬೇಕೆಂದು ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು ಮನವಿಮಾಡಿಕೊಂಡಿದ್ದಾರೆ.