Tuesday, November 26, 2024
ಸುದ್ದಿ

ಅ.8 ರಂದು ಬಿಸಿರೋಡಿನ ಬಸ್ತಿಪಡ್ಪು ಶೌರ್ಯ ಮೈದಾನದಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ವಿಶ್ವಹಿಂದೂ ಪರಿಷತ್ – ಬಜರಂಗದಳ ಬಂಟ್ವಾಳ ವತಿಯಿಂದ ಅ.8 ರಂದು ಸಂಜೆ 4.30 ಗಂಟೆಗೆ ಬಿಸಿರೋಡಿನ ಬಸ್ತಿಪಡ್ಪು ಶೌರ್ಯ ಮೈದಾನದಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯಲಿದೆ.ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷ ಯುವ ವಕೀಲ ಪ್ರಸಾದ್ ಕುಮಾರ್ ರೈ ತಿಳಿಸಿದರು.


ಚಿತ್ರದುರ್ಗದಿಂದ ಹೊರಟಿರುವ ಶೌರ್ಯಜಾಗರಣ ರಥಯಾತ್ರೆ ಅ.8 ರಂದು ಬಂಟ್ವಾಳ ತಾಲೂಕಿಗೆ ಆಗಮಿಸಲಿದ್ದು, ಮಾಣಿಯಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನ 3 ಗಂಟೆ ವೇಳೆಗೆ ರಥ ಬಿಸಿರೋಡಿನ ಕೈಕಂಬಕ್ಕೆ ಬರಲಿದೆ.ಅಲ್ಲಿಂದ ಸಾವಿರಾರು ಹಿಂದೂ ಕಾರ್ಯಕರ್ತರ ಜೊತೆ ವಿವಿಧ ರೀತಿಯ ಆಕರ್ಷಕವಾದ ಶೋಭಾಯಾತ್ರೆ ಮೂಲಕ ಸಮಾಜೋತ್ಸವ ನಡೆಯುವ ಮೈದಾನಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
ಬಂಟ್ವಾಳ ,ಕಲ್ಲಡ್ಕ ಮತ್ತು ವಿಟ್ಲ ಮೂರು ಪ್ರಖಂಡಗಳ ಜೊತೆಯಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ.
ಪ್ರತಿ ಗ್ರಾಮ ಮಟ್ಟದಲ್ಲಿ ಬೈಠಕ್ ನಡೆಸಲಾಗಿದ್ದು,ಅತ್ಯಂತ ಉತ್ಸಾಹದಿಂದ ಸಭೆಯಲ್ಲಿ ಭಾಗಿಯಾಗಿದ್ದು, ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಜನರು ಸೇರಲಿದ್ದು, ಯಶಸ್ವಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧ್ವಿ ದೇವಿ ಸರಸ್ವತಿ ಜೀ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಒಡಿಯೂರು ಗುರುದೇವಾನಂದ ಸ್ವಾಮೀಜಿ , ಶ್ರೀಧಾಮಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ, ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತ್ಯನ್ಯಾಂದ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಕಾರ್ಯಧ್ಯಕ್ಷ ಡಾ| ಎಂ.ಬಿ.ಪುರಾಣಿಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಉಪಸ್ಥಿತರುವರು.
ಶೌರ್ಯ ಜಾಗರಣ ರಥಯಾತ್ರೆ ಯ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾವೇಶ್ವರ ದೇವಸ್ಥಾನದ ಕಾರ್ಯಧ್ಯಕ್ಷ ರಘ ಎಲ್ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಸಂಯೋಜಕ ಭರತ್ ಕುಮ್ಡೆಲು, ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ, ಕಲ್ಲಡ್ಕ ಪ್ರಖಂಡದ ಅಧ್ಯಕ್ಷ ಸಚಿನ್ ಮೆಲ್ಕಾರ್,ಮಠ ಮಂದಿರಗಳ ಜಿಲ್ಲಾ ಸಂಪರ್ಕ ಪ್ರಮುಖ್ ಪದ್ಮನಾಭ ಕಟ್ಟೆ ವಿಟ್ಲ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ರಥಯಾತ್ರೆಯ ಸಂಕ್ಷಿಪ್ತ ಉದ್ದೇಶ

ಹಿಂದೂ ಧರ್ಮದ ವೈಭವಯುತ ಚರಿತ್ರೆ, ಸಂಸ್ಕೃತಿ, ಸಂಪ್ರದಾಯ ಇಡೀ ಸಮಾಜಕ್ಕೆ ತಿಳಿಸುತ್ತಾ ಸಮಾಜಕ್ಕೆ ಅನ್ಯರಿಂದ ಆಗಿರುವ ಹಾನಿ ಹಾಗೂ ಪ್ರಸ್ತುತ ಆಗುತ್ತಿರುವ ಹಾನಿ ಅನ್ಯರ ತುಷ್ಟಿಕರಣ ಮಾಡಿ ರಾಜಕೀಯ ಮಾಡುತ್ತಿರುವ ಪರಿ ತಿಳಿಸಿ ಅದನ್ನು ತುಳಿದು ನಿಂತು ಗೌರವಯುತ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಕೊಡುವುದು
• ಹಿಂದೂ ಧರ್ಮದ ಅಡಿಪಾಯಗಳಾದ ಗೋವು, ದೇವಸ್ಥಾನಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರೇರಣೆ ಕೊಡುವುದು.
ಸಮಾಜದಲ್ಲಿ ಪರಸ್ಪರ ಸಾಮರಸ್ಯ ಕಾಪಾಡಿ ನಮ್ಮ ಹೆಮ್ಮೆಯ ಸನಾತನ ಹಿಂದೂಧರ್ಮ ಮತ್ತು ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಹೇಳಿ ಸಮರ್ಪಕವಾಗಿ ಆಚರಿಸುವಂತೆ ಪ್ರೇರಣೆ ನೀಡುವುದು.
• ಯುವಪೀಳಿಗೆಯನ್ನು ಪಾಶ್ಚಾತ್ಯ ಪ್ರಭಾವದಿಂದ ಹೊರ ತಂದು ಮಹಾ ಪಾತಕಗಳಿಂದ ಮುಕ್ತಗೊಳಿಸಿ ನಮ್ಮ ಹೆಮ್ಮೆಯ ಧರ್ಮ ಆಚರಣೆಗೆ ಸಿದ್ಧಪಡಿಸುವ ಯೋಜನೆ ಮತ್ತು ಪ್ರೇರೇಪಣೆ ಮಾಡುವುದು.
* ಹಿಂದೂ ಯುವಕರಲ್ಲಿ ನಮ್ಮ ಪೂರ್ವಜರ ಮತ್ತು ಹುತಾತ್ಮರ ಜೀವನದ ಬಗ್ಗೆ ಹೆಮ್ಮೆಯ ಭಾವವನ್ನು ಮೂಡಿಸುವುದು. ಅವರ ಪ್ರೇರಣೆಯಿಂದ ಸ್ಫೂರ್ತಿ ಪಡೆದು ಯುವಕರು ದೇಶಕ್ಕಾಗಿ ಬದುಕುವ ಸಂಕಲ್ಪ ಮಾಡಿಸುವುದು.ಹಿಂದೂ ಧರ್ಮ ಮತ್ತು ಸಂಸ್ಕೃತಿಯ ವೇಲನ ಗೌರವವನ್ನು ಜಾಗೃತಗೊಳಿಸುವುದು
ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಎಂಬ ಘೋಷಣೆಯಿಂದ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯಕ್ಕಾಗಿ ಸಂಕಲ್ಪಮಾಡಿಸುವುದು. ಯುವಕರನ್ನು ವ್ಯಸನಗಳಿಂದ ಮುಕ್ತಿಗೊಳಿಸಿ, ಸಂಸ್ಕಾರವನ್ನು ನೀಡಿ ದೇಶಭಕ್ತರನ್ನಾಗಿಸುವುದು.