ಬಂಟ್ವಾಳ : ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟ ಒಕ್ಕೂಟ (ರಿ) ಕೆದಿಲ, ಬಂಟ್ವಾಳ ತಾಲೂಕು ಇದರ ವಾರ್ಷಿಕ ಮಹಾಸಭೆಯು ಅ.3ರಂದು ಕೆದಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಹರೀಶ.ವಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಕ್ಕೂಟದ ವಾರ್ಷಿಕ ವರದಿಯನ್ನು ಎಂ.ಬಿ,ಕೆ ಶ್ರೀಮತಿ ಆಶಾಲತಾರವರು ಮಂಡಿಸಿದರು. ಎಲ್.ಸಿ.ಆರ್.ಪಿ ಶ್ರೀಮತಿ ದಿವ್ಯ ರವರು ಲೆಕ್ಕಪತ್ರವನ್ನು ವಾಚಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ನಿಕಟಪೂರ್ವ ಪದಾಧಿಕಾರಿಗಳನ್ನು ಸನ್ಮಾನ ಮಾಡುವ ಮೂಲಕ ಬೀಳ್ಕೊಡಲಾಯಿತು. ಅದೇ ರೀತಿ ಘನತ್ಯಾಜ್ಯ ಘಟಕದಲ್ಲಿ ಕರ್ತವ್ಯ ನಿರ್ವಹಿಸುವವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಜೀವಿನಿ ಒಕ್ಕೂಟದ ಮಾಹಿತಿದಾರರಾಗಿ ಆಗಮಿಸಿದ ತಾಲೂಕು ಸಂಜೀವಿನಿ ಅಭಿಯಾನದ ನಿರ್ವಹಣಾ ಘಟಕದ ಮೇಲ್ವಿಚಾರಕರಾದ ಶ್ರೀಮತಿ ಕುಸುಮ ಹಾಗೂ ತಾಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕದ ವಲಯ ಸಂಪನ್ಮೂಲ ವ್ಯಕ್ತಿಯವರಾದ ಶ್ರೀಮತಿ ಸವಿತರವರು ಸಂಜೀವಿನಿ ಒಕ್ಕೂಟದ ಮಾಹಿತಿಯನ್ನು ಸವಿಸ್ತಾರವಾಗಿ ಸಭೆಗೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಬೀಪಾತುಮ್ಮ, ಪಂಚಾಯತ್ ಅಭಿವೃದ್ದಿ ಅಧಿಕಾರಿವರಾದ ಶ್ರೀ ಅಜಿತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬಂದಿಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲರವರು ಸ್ವಾಗತಿಸಿ ಶ್ರೀಮತಿ ರಮಣಿಯವರು ವಂದಿಸಿದರು. ಶ್ರೀಮತಿ ಗೀತಾ ಜಯಪ್ರಸಾದ್ ರವರು ಕಾರ್ಯಕ್ರಮ ನಿರೂಪಿಸಿದರು.