ದಸರಾ ಜಂಬೂಸವಾರಿಯ ದಿನ ಕುಶಾಲತೋಪು ಸಿಡಿಸುವ ಫಿರಂಗಿಗಳಿಗೆ ಅರಮನೆ ಅಂಗಳದಲ್ಲಿ ಸಾಂಪ್ರದಾಯಿಕ ಪೂಜೆ – ಕಹಳೆ ನ್ಯೂಸ್
ಮೈಸೂರು: ದಸರಾ ಜಂಬೂಸವಾರಿಯ ದಿನ ಕುಶಾಲತೋಪು ಸಿಡಿಸುವ ಫಿರಂಗಿ ಗಾಡಿಗಳಿಗಿಂದು ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಫಿರಂಗಿ ತಾಲೀಮಿಗೆ ಚಾಲನೆ ನೀಡಲಾಯಿತು.
ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಹೊರಡುವ ಮುನ್ನ ನಾಡ ಅಧಿದೇವತೆ ಆಸೀನಳಾಗುವ ಚಿನ್ನದ ಅಂಬಾರಿಗೆ ಪುμÁ್ಪರ್ಚನೆಯ ಬಳಿಕ, ಜಂಬೂಸವಾರಿ ಮೆರವಣಿಗೆ ವೇಳೆ 21 ಕುಶಾಲ ತೋಪುಗಳನ್ನು ಸಿಡಿಸುವ ತಾಲೀಮು ನಾಳೆಯಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅರಮನೆಯ ಆನೆ ಬಾಗಿಲಿನಲ್ಲಿರುವ 11 ಫಿರಂಗಿ ಗಾಡಿಗಳಿಗೆ ಪೂಜೆ ನಡೆಯಿತು. ನಗರದ ಪೆÇಲೀಸ್ ಕಮಿಷನರ್ ರಮೇಶ್ ಬಾನೋತ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಮತ್ತು ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.
ಫಿರಂಗಿ ಗಾಡಿಗಳಿಗೆ ಪೂಜೆ ನೆರವೇರಿಸಿದ ಅರ್ಚಕ ಪ್ರಹ್ಲಾದ್ ರಾವ್ ಮಾತನಾಡಿ, “ಚಾಮುಂಡಿ ತಾಯಿಗೆ ಪುμÁ್ಪರ್ಚನೆ ಮಾಡಿದ ಬಳಿಕ 21 ಕುಶಾಲತೋಪುಗಳನ್ನು ಸಿಡಿಸುತ್ತಾರೆ. ಇದು ದೇವಿಗೆ ಮತ್ತು ಆನೆಗಳಿಗೆ ಗೌರವ ಕೊಡುವ ಹಾಗೂ ವಿಜಯದ ಸಂಕೇತ. ಫಿರಂಗಿ ತಾಲೀಮಿಗೂ ಮೊದಲು ಎಲ್ಲಾ ಕಾರ್ಯಗಳಿಗೂ ವಿಜಯವಾಗಲಿ ಎಂದು ವಿಜಯ ಗಣಪತಿ ಹೆಸರಿನಲ್ಲಿ ಪೂಜೆ ಮಾಡುತ್ತೇವೆ. ನಂತರ ಚಾಮುಂಡೇಶ್ವರಿಗೆ ಪೂಜೆ ಮಾಡಿ ಮೃತ್ಯುಂಜಯ ಮಂತ್ರ ಹೇಳಿ ತಾಲೀಮಿನಲ್ಲಿ ಭಾಗಿಯಾಗುವವರಿಗೆ ಯಾವುದೇ ತೊಂದರೆಯಾಗಬಾರದು” ಎಂದು ಪ್ರಾರ್ಥಿಸುತ್ತೇವೆ ಎಂದರು.
“ಕುಶಾಲತೋಪು ಸಿಡಿಸುವುದು ಗೌರವದ ಸಂಕೇತ. ರಾಷ್ಟ್ರಪತಿಯವರಿಗೆ ಗೌರವ ಸೂಚಕವಾಗಿ 21 ಬಾರಿ ಮತ್ತು ಇತರ ಗಣ್ಯರಿಗೆ 8 ಬಾರಿ ಸಿಡಿಸುತ್ತಾರೆ. ಇದೇ ರೀತಿ ಚಾಮುಂಡೇಶ್ವರಿಗೆ ಹಾಗೂ ಆನೆಗಳಿಗೆ ಗೌರವ ಸೂಚಿಸಲು ಕುಶಾಲತೋಪು ಸಿಡಿಸಲಾಗುತ್ತದೆ. ನಾಳೆಯಿಂದ ಫಿರಂಗಿ ತಾಲೀಮು ಶುರುವಾಗಲಿದೆ” ಎಂದು ಅವರು ಹೇಳಿದರು.
ಡಿಸಿಎಫ್ ಸೌರವ್ ಕುಮಾರ್ ಮಾತನಾಡಿ, “ಇವತ್ತು ಫಿರಂಗಿಗಳಿಗೆ ಪೂಜೆ ಸಲ್ಲಿಸಲಾಗಿದ್ದು, ಫೈರಿಂಗ್ ಟ್ರೈನಿಂಗ್ ಯಾವಾಗ ಮಾಡಬೇಕು ಎಂದು ಇನ್ನೂ ನಿರ್ಧಾರ ಆಗಿಲ್ಲ. ಈಗಾಗಲೇ 14 ಆನೆಗಳು ರೆಡಿ ಇವೆ. 14 ಆನೆಗಳ ಪೈಕಿ 7 ಆನೆಗಳ ಮೇಲೆ ಭಾರ ಹಾಕಿ ತಾಲೀಮು ಕೊಟ್ಟಿದ್ದೇವೆ. ಎಲ್ಲಾ ಆನೆಗಳು ಆರೋಗ್ಯವಾಗಿವೆ. ಶೀಘ್ರದಲ್ಲೇ ಮರದ ಅಂಬಾರಿ ತಾಲೀಮು ಆರಂಭಿಸುತ್ತೇವೆ” ಎಂದು ತಿಳಿಸಿದರು.
ಅಕ್ಟೋಬರ್ 15ರಂದು ದಸರಾ ಮಹೋತ್ಸವಕ್ಕೆ ಚಾಲನೆ: ಅಕ್ಟೋಬರ್ 15ರಂದು ಭಾನುವಾರ ಬೆಳಗ್ಗೆ 10:15ರಿಂದ 10:36ರ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಗಣ್ಯರು ಪುμÁ್ಪರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡುವರು. ಆ ನಂತರ 9 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ನಾದಬ್ರಹ್ಮ ಖ್ಯಾತಿಯ ಹಂಸಲೇಖ ದಸರಾ ಉದ್ಘಾಟನೆ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.