Recent Posts

Monday, January 20, 2025
ಸುದ್ದಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಒಡಿಶಾ ರಾಜ್ಯದಲ್ಲಿ ಭಾರೀ ತಿತ್ಲಿ ಚಂಡಮಾರುತ – ಕಹಳೆ ನ್ಯೂಸ್

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಎದ್ದಿರುವ ಅತ್ಯಂತ ತೀವ್ರ ಚಂಡಮಾರುತ ತಿತ್ಲಿ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಗಂಟೆಗೆ 165 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಚಂಡಮಾರುತ ಒಡಿಶಾ ರಾಜ್ಯವನ್ನು ತತ್ತರಿಸುವಂತೆ ಮಾಡಿದೆ.

ಹಲವು ಕಡೆಗಳಲ್ಲಿ ವ್ಯಾಪಕ ಭೂಕುಸಿತಗಳು ಸಂಭವಿಸಿದ್ದು, ಕರಾವಳಿಯ ಐದು ಜಿಲ್ಲೆಗಳ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸರ್ಕಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಒಡಿಶಾದ ಗೋಪಾಲಪುರ ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ವ್ಯಾಪಕ ಭೂಕುಸಿತ ಸಂಭವಿಸಿದ್ದು, ಆಂಧ್ರಪ್ರದೇಶದ ಕಳಿಂಗಪಪಟ್ಟಣಂಗೆ ಅಪ್ಪಳಿಸುವ ನಿರೀಕ್ಷೆ ಇದೆ. ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ವ್ಯಾಪಕ ನಷ್ಟ ಸಂಭವಿಸಿದೆ. ಬೆರ್ಹ್ರಾಪುರ- ಗೋಪಾಲಪುರ ಹೆದ್ದಾರಿಯಲ್ಲಿ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆಂಧ್ರದ ಶ್ರೀಕಾಕುಲಂನಿಂದ ಇಚ್ಚಾಪುರಂವರೆಗೆ ರೈಲು ಹಾಗೂ ರಸ್ತೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇಡೀ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶ್ರೀಕಾಕುಲಂ ಜಿಲ್ಲೆಯ ಇಚ್ಚಾಪುರ, ಕವಿತಿ, ಪಲಾಸ ತಾಲೂಕುಗಳಲ್ಲಿ 200 ಮಿಲೀಮೀಟರ್‌ಗಿಂತಲೂ ಅಧಿಕ ಮಳೆ ಸುರಿದಿದೆ. ಒಟ್ಟಾಗಿ ತಿತ್ಲಿ ಚಂಡಮಾರುತ್ತಾ ಪೂರ್ವ ಕರಾವಳಿಯನ್ನು ತತ್ತರಿಸುವಂತೆ ಮಾಡಿದೆ.