ಪುತ್ತೂರಿಗೆ ಅ.07ಕ್ಕೆ ಶೌರ್ಯ ಜಾಗರಣ ರಥಯಾತ್ರೆ : ಹಿಂದು ಶೌರ್ಯ ಸಂಗಮದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಬೊಟ್ಯಾಡಿ ಆಯ್ಕೆ – ಕಹಳೆ ನ್ಯೂಸ್
ಪುತ್ತೂರು : ಪುತ್ತೂರಿಗೆ ಅ.7ರಂದು ಬರುವ ಶೌರ್ಯ ಜಾಗರಣಾ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಬೊಟ್ಯಾಡಿಸಂಚಾಲಕರಾಗಿ ಕೃಷ್ಣಪ್ರಸಾದ್ ಬೆಟ್ಟ ಮತ್ತು ಕಾರ್ಯದರ್ಶಿಯಾಗಿ ವಿರೂಪಾಕ್ಷ ಭಟ್ ಆಯ್ಕೆಯಾಗಿದ್ದಾರೆ.
ಸ್ವಾಗತ ಸಮಿತಿಯ ಉಪಾಧ್ಯಕ್ಷರುಗಳಾಗಿ ಭಾಸ್ಕರ ಬಲ್ಯಾಯ ಕಾವು, ಅಜಿತ್ ರೈ ಹೊಸಮನೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶರಾವತಿ ರವಿನಾರಾಯಣ, ಜಯಂತಿ ನಾಯಕ್, ಸಹ ಕಾರ್ಯದರ್ಶಿಗಳಾಗಿ ದಿನೇಶ್ ಪಂಜಿಗ, ಸಚಿನ್ ಶೆಣೈ, ಸದಸ್ಯರುಗಳಾಗಿ ಡಾ.ದಯಾಕರ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಸಂಪತ್ ಸುವರ್ಣ, ಜನಾರ್ದನ ಕೋಡಿ, ಮಹಾಬಲ ರೈ, ಅಶೋಕ್ ಬ್ರಹ್ಮನಗರ, ಆನಂದ ನೆಕ್ಕರೆ, ಮನೀಶ್ ಬನ್ನೂರು, ಮಮತ ಅವರು ಆಯ್ಕೆಯಾಗಿದ್ದಾರೆ.
ವಿಶ್ವ ಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ದೇಶದಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಲಾಗಿದ್ದು, ಸೆ.25ರಂದು ಚಿತ್ರದುರ್ಗದಿಂದ ಆರಂಭಗೊಂಡ ರಥಯಾತ್ರೆ ಕರ್ನಾಟಕ ದಕ್ಷಿಣ ಪ್ರಾಂತದಲ್ಲಿರುವ ಜಿಲ್ಲೆಗಳ ಮೂಲಕ ಹಾದು ಅ.7ಕ್ಕೆ ಪುತ್ತೂರಿನಲ್ಲಿ ಸಂಜೆ ಬೃಹತ್ ಶೋಭಾಯಾತ್ರೆ ಮತ್ತು ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದು ಶೌರ್ಯ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ.