Saturday, January 25, 2025
ಸುದ್ದಿ

ಕೋಮು ಸೌಹಾರ್ದತೆ ಧಕ್ಕೆ ಆರೋಪ..! : ಹಿಂದೂ ಮುಖಂಡ ಅಕ್ಷಯ್ ರಜಪೂತ್ ಗೆ ಗಡಿಪಾರು ನೋಟಿಸ್ ಜಾರಿ – ಕಹಳೆ ನ್ಯೂಸ್

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸಿಕೊಂಡಿರುವ ಹಾಗೂ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಹಿಂದೂ ಮುಖಂಡ ಅಕ್ಷಯ್ ರಜಪೂತ್ ಇವರಿಗೆ ಗಡಿಪಾರು ಆದೇಶ ನೀಡಿ ನೋಟಿಸ್ ಜಾರಿಯಾಗಿದೆ.

ಕರ್ನಾಟಕ ಪೆÇಲೀಸ್ ಕಾಯ್ದೆ 1963 ಕಲಂ 55 (ಎ) ಮತ್ತು (ಬಿ) ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಪೆÇಲೀಸ್ ಉಪ ಅಧೀಕ್ಷಕರು, ಉಪ ವಿಭಾಗ ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಮು ಸೌಹಾರ್ದತೆ ಕದಡುವ ಪ್ರಕರಣಗಳಲ್ಲಿ ಭಾಗಿಯಾಗಲು ಮುಂದಾಗಿದ್ದು ಇವರ ಚಟುವಟಿಕೆ ನಿಯಂತ್ರಿಸದೆ ಹೋದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುವುದಲ್ಲದೇ ಅವರ ಜೀವ ಮತ್ತು ಸೊತ್ತಿಗೆ ಯಾವುದೇ ರಕ್ಷಣೆ ಇಲ್ಲದೇ ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಧಕ್ಕೆಯನ್ನುಂಟು ಮಾಡುವಂತಹ ಸಾಧ್ಯತೆಗಳಿದೆ ಎಂದು ಪೆÇಲೀಸ್ ಇಲಾಖೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು