Saturday, January 25, 2025
ಸುದ್ದಿ

ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೆರ್ಣಂಕಿಲದಲ್ಲಿ ಪೇಜಾವರ ಶ್ರೀಗಳ ಚಾತುರ್ಮಾಸ್ಯ ದಿಗ್ವಿಜಯೋತ್ಸವ ; ಕ್ಷೇತ್ರದ ನೂತನ ಧ್ವಜಸ್ಥಂಭ ತೈಲಾಧಿವಾಸ ಚಾಲನೆ –ಕಹಳೆ ನ್ಯೂಸ್

ಪರಮ ಪೂಜ್ಯ ಪೇಜಾವರ ಶ್ರೀಗಳು ತನ್ನ 36ನೇ ಚಾತುರ್ಮಾಸ್ಯ ವೃತವನ್ನು ಮೈಸೂರಿನ ಕೃಷ್ಣಧಾಮದಲ್ಲಿ ಯಶಸ್ವಿಯಾಗಿ ಪೂರೈಸಿಕೊಂಡು ದಿಗ್ವಿಜಯೋತ್ಸವದ ಮೂಲಕ ಶ್ರೀ ಕ್ಷೇತ್ರ ಪೆರ್ಣಂಕಿಲಕ್ಕೆ ಚಿತ್ತೈಸಿದರು. ದಿನಾಂಕ 02ರಂದು ಸಂಜೆ ಪೆರ್ಣಂಕಿಲ ಜೋಡುಕಟ್ಟೆಯ ಬಳಿಯಿಂದ ಮಂಗಳವಾದ್ಯ, ಚಂಡೆಯ ನಾದ, ಭಜನಾ ತಂಡಗಳು, ವೇದಘೋಷದ ಮೂಲಕ ಭವ್ಯ ಮೆರವಣಿಗೆಯ ಮೂಲಕ ಶ್ರೀಗಳನ್ನು ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಶ್ರೀಗಳು ಕ್ಷೇತ್ರಾಧಿಪತಿ ದೇವರುಗಳ ದರ್ಶನ ಮಾಡಿ ಆರತಿ ಬೆಳಗಿದರು.


ಸಮಗ್ರ ಜೀರ್ಣೋದ್ಧಾರದ ಭಾಗವಾದ ಕ್ಷೇತ್ರದ ಧ್ವಜಮರವನ್ನು 3 ತಿಂಗಳು ಕೆಸರಿನಲ್ಲಿ ಹದಗೊಳಿಸಿದ್ದು ಇಂದು ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ಪರಿಶುದ್ಧ ತಿಲ ತೈಲ ಸಮರ್ಪಿಸುವುದರೊಂದಿಗೆ ತೈಲಾಧಿವಾಸಕ್ಕೆ ಒಳಪಡಿಸಲಾಯಿತು. ಭಕ್ತಜನರು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿ ತೈಲ ಸಮರ್ಪಿಸಿದರು. ನೂತನವಾಗಿ ಪುನರ್ನಿರ್ಮಾಣ ಮಾಡುತ್ತಿರುವ ಪೇಜಾವರ ಮಠದ ಶಾಖೆಯ ಕಾಮಗಾರಿಯ ಪ್ರಗತಿಯನ್ನು ಶ್ರೀಗಳು ವೀಕ್ಷಿಸಿದರು.
ಸಭಾ ಕಾರ್ಯಕ್ರಮದಲ್ಲಿ ಶ್ರೀವತ್ಸ ಭಟ್ ಮತ್ತು ಹರೀಶ ಸರಳಾಯ ವೇದ ಘೋಷದೊಂದಿಗೆ ಪ್ರಾರ್ಥನೆಗೈದರು. ಸಮಿತಿಯ ಅಧ್ಯಕ್ಷರಾದ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಜೀರ್ಣೋದ್ಧಾರಕ್ಕೆ ಧನಸಹಾಯವಿತ್ತ ದಾನಿಗಳನ್ನು ಶ್ರೀಗಳು ಶಾಲು ಹೊದೆಸಿ ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು. ಭಕ್ತಜನರ ಆಶಯದಂತೆ ಶ್ರೀಗಳಿಗೆ ಸದ್ಗುರು ಫಲಾರ್ಪಣೆ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಫಲಗಳಿಂದ ಅರ್ಚಿಸಿ, ಆರತಿ ಬೆಳಗಿಸಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಉದ್ಯಮಿಗಳಾದ ಜಯಲಕ್ಷ್ಮೀ ಸಿಲ್ಕ್ ನ ವಿರೇಂದ್ರ ಹೆಗ್ಡೆ ದಂಪತಿ, ಸಾಯಿರಾಧಾ ಮನೋಹರ ಶೆಟ್ಟಿ, ಪೇಜಾವರ ಮಠದ ದೀವಾನರಾದ ರಘುರಾಮ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ವಾಸ್ತುತಂತ್ರಜ್ಞರಾದ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ, ಕ್ಷೇತ್ರದ ತಂತ್ರಿಗಳಾದ ಮಧುಸೂಧನ ತಂತ್ರಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್ ಕಾರ್ಯಕ್ರಮ ಸಂಯೋಜಿಸಿದರು. ಉಮೇಶ್ ನಾಯಕ್ ಪೆರ್ಣಂಕಿಲ ನಿರೂಪಿಸಿದರು. ಸರ್ವಭಕ್ತ ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು