Friday, January 24, 2025
ಸುದ್ದಿ

ಮಹಿಳೆ ಮೇಲೆ ಚಿರತೆ ದಾಳಿ: ಗಂಭೀರ ಗಾಯ – ಕಹಳೆ ನ್ಯೂಸ್

ತುಮಕೂರು : ಮಹಿಳೆ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಬುಧವಾರ ನಡೆದಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ವಜ್ರದಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ. ಬುಧವಾರ ಬೆಳ್ಳಂ ಬೆಳಿಗ್ಗೆ ಘಟನೆ ನಡೆದಿದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಜ್ರದಹಳ್ಳಿ ಗ್ರಾಮದ ಸುಮಾರು 35 ವರ್ಷದ ಸವಿತಾ ಎಂಬುವ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದೆ.
ಇಂದು ಬೆಳಗ್ಗೆ ಬಹಿರ್ದೆಸೆಗೆಂದು ಹೊಲದ ಕಡೆ ತೆರಳಿದಾಗ ಪೊದೆಯಲ್ಲಿದ್ದ ಅವತಿದ್ದ ಚಿರತೆ ಸವಿತಾ ಮೇಲೆ ಹಠಾತ್ತನೆ ಎರಗಿದೆ. ಚಿರತೆ ದಾಳಿಯಿಂದ ಸವಿತಾ ಬಲಗೈಗೆ ಕಚ್ಚಿದ ಗಾಯವಾಗಿದ್ದು , ತಲೆಯ ಬಾಗ ಹಾಗೂ ಬಲಗಣ್ಣಿನ ಮೇಲೆ ಹಿಡಿದು ಪರಚಿ ಗಾಯಗೊಳಿಸಿದೆ. ಮಹಿಳೆಯ ಚಿರಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಕೂಗಾಡಿದಾಗ ಚಿರತೆಯು ಹೆದರಿ ಓಡಿಹೋಗಿದೆ.

ಚಿರತೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಮದುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಸಿ.ರವಿ ಹಾಗೂ ಉಪವಲಯ ಅರಣ್ಯಾಧಿಕಾರಿ ಮುತ್ತುರಾಜ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸುವ ಜೊತೆಗೆ ಘಟನೆಯ ವಿವರಗಳನ್ನು ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.