Friday, January 24, 2025
ಸುದ್ದಿ

ಅ, 6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳ – ಕಹಳೆ ನ್ಯೂಸ್

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್ 6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇನೆ.


ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 204 ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು, ಮೇಳದಲ್ಲಿ ಭಾಗವಹಿಸುವ ಸಾವಿರಾರು ಮಂದಿಗೆ ಉದ್ಯೋಗ ದೊರೆಯಲಿದೆ. ಬೆಳ್ತಂಗಡಿಯ ಗ್ರಾಮೀಣ ಭಾಗದ ಉದ್ಯೋಗಾಕಾಂಕ್ಷಿ ಯುವಕ- ಯುವತಿಯರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಪದವಿ ಶಿಕ್ಷಣ, ಐಟಿಐ, ಡಿಪ್ಲೋಮಾ, ಎಂಜಿನಿಯರಿoಗ್ ಹಾಗೂ ಇನ್ನಿತರ ಪಧವೀದರರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಅವರು ತಿಳಿಸಿದರು ಈ ಸಂಧರ್ಭದಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಸೂಚನೆ : ಅಕ್ಟೋಬರ್ 6 ರಂದು ಬೆಳಿಗ್ಗೆ 7ಗಂಟೆಗೆ ಸರಿಯಾಗಿ ಆಳ್ವಾಸ್ ನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಶ್ರಮಿಕ ಕಚೇರಿಯ ಬಳಿಯಿಂದ ಉಚಿತ ಬಸ್ ವ್ಯವಸ್ಥೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಶ್ರಮಿಕ ಕಚೇರಿಯನ್ನು ಸಂಪರ್ಕಿಸಿ – 9901212207