ಸನಾತನ ಧರ್ಮದ ಬಗ್ಗೆ ದ್ವೇಷಪೂರಿತ ಹೇಳಿಕೆಯ ಪ್ರಕರಣದಲ್ಲಿ ದಾದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! ಉದಯನಿಧಿ ಸ್ಟಾಲಿನ್, ನಿಖಿಲ ವಾಗಳೆ , ಜಿತೇಂದ್ರ ಆವ್ಹಾಡ್ ಇವರ ವಿರುದ್ಧ ‘ಹೇಟ್ ಸ್ಪೀಚ್’ನ ಅಪರಾಧ ದಾಖಲಿಸಿ ! – ಹಿಂದುತ್ವನಿಷ್ಠ ಸಂಘಟನೆಗಳ ಬೇಡಿಕೆ – ಕಹಳೆ ನ್ಯೂಸ್
ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹಾಗೂ ದ್ವೇಷಪೂರಿತ ಹೇಳಿಕೆಯಿಂದ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವ ಪ್ರಕರಣದಲ್ಲಿ ತಮಿಳುನಾಡಿನ ಸಚಿವ ಉದಯ ನಿಧಿ ಸ್ಟಾಲಿನ್, ಕರ್ನಾಟಕದ ಗ್ರಾಮಿಣ ವಿಕಾಸ ಸಚಿವ ಪ್ರಿಯಾಂಕ ಖರ್ಗೆ, ತಮಿಳುನಾಡಿನ ದ್ರಮುಕದ ಸಂಸದ ಎ. ರಾಜಾ ಇವರ ಜೊತೆಗೆ ಮಹಾರಾಷ್ಟ್ರದಲ್ಲಿನ ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡ ಮತ್ತು ಪತ್ರಕರ್ತ ನಿಖಿಲ ವಾಗಳೆ ಇವರ ವಿರುದ್ಧ ಹೇಟ್ ಸ್ಪೀಚ್ (ದ್ವೇಷ ಪೂರಿತ ಹೇಳಿಕೆ) ಆರೋಪ ದಾಖಲಿಸಲು ಹಿಂದುತ್ವರಿಷ್ಟರಿAದ ಆಗ್ರಹಿಸಲಾಗಿದೆ. ಹಿಂದುತ್ವನಿಷ್ಠರು ದಾದರ್ ನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಇದರ ಬಗ್ಗೆ ಲಿಖಿತ ದೂರು ನೀಡಿದ್ದಾರೆ.
ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೋನಾ , ಏಡ್ಸ್ ಮತ್ತು ಕುಷ್ಠ ರೋಗ ಮುಂತಾದ ರೋಗದ ಜೊತೆಗೆ ತುಲನೆ ಮಾಡಿ ಸನಾತನ ಧರ್ಮವನ್ನು ನಾಶ ಮಾಡುವ ಬಗ್ಗೆ ದ್ರಮುಕ ಪಕ್ಷದ ತಮಿಳನಾಡಿನ ಸಚಿವ ಉದಯ ನಿಧಿ ಸ್ಟಾಲಿನ್, ಕಾಂಗ್ರೆಸ್ ಪಕ್ಷದ ಕರ್ನಾಟಕದ ಗ್ರಾಮೀಣ ವಿಕಾಸ ಸಚಿವ ಪ್ರಿಯಾಂಕ ಖರ್ಗೆ ಮತ್ತು ತಮಿಳುನಾಡಿನ ದ್ರಮುಕ ಪಕ್ಷದ ಸಂಸದ ಎ. ರಾಜ ಇವರು ಮಾತನಾಡಿದ್ದರು. ಅದೇ ರೀತಿ ಪತ್ರಕರ್ತ ನಿಖಿಲ ವಾಗಳೆ ಇವರೂ ಇತ್ತೀಚಿಗೆ ಫೇಸ್ಬುಕ್ ಮೂಲಕ ಉದಯನಿಧಿ ಸ್ಟಾಲಿನ್ ಇವರನ್ನು ನಾನು ಸಮರ್ಥಿಸುತ್ತೇನೆ, ಸನಾತನ ಧರ್ಮ ಒಂದು ರೋಗದಂತಿದೆ ಎಂದು ದ್ವೇಷಪೂರಿತ ಪೋಸ್ಟ್ ಮಾಡಿದ್ದರು. ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡ್ ಇವರೂ ಸನಾತನ ಧರ್ಮ ಎಂದರೆ ದೇಶಕ್ಕೆ ಅಂಟಿರುವ ಕ್ರಿಮಿ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಯಾವುದೇ ಧರ್ಮದ ಬಗ್ಗೆ ಅಗೌರವವಾಗಿ, ನಿಂದಿಸುವ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ, ಹಾಗೂ ದ್ವೇಷ ಪಸರಿಸುವ, ವೈರತ್ವ ನಿರ್ಮಾಣ ಮಾಡುವುದು ಭಾರತೀಯ ದಂಡ ಸಂಹಿತೆ ಕಲಂ 153(ಅ) ,153 (ಬ), 295 (ಅ ), 298,505 ಹಾಗೂ ಮಾಹಿತಿ ತಂತ್ರಜ್ಞಾನ ಕಾನೂನಿನ ಅಂತರ್ಗತ ಅಪರಾಧವಾಗಿದೆಯೆಂದು ದೂರಿನಲ್ಲಿ ದಾಖಲಿಸಲಾಗಿದೆ. ಆದ್ದರಿಂದ ಸನಾತನ ಧರ್ಮದ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡುವವರನ್ನು ತಕ್ಷಣ ಬಂಧಿಸಬೇಕೆAದು ಆಗ್ರಹಿಸಲಾಗಿದೆ. ಇದರ ಬಗ್ಗೆ ದಾದರ್ ನ ಶಿವಾಜಿ ಪಾರ್ಕ್ ಪೊಲೀಸರು ಘಟನೆಯನ್ನು ಖಾತ್ರಿಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ. ಪೊಲೀಸರಿಂದ ಯೋಗ್ಯ ಕ್ರಮ ಕೈಗೊಳ್ಳಲಾಗದಿದ್ದರೆ ಆಗ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಅವಮಾನ ಆಗಿರುವ ಪ್ರಕರಣದ ಅರ್ಜಿ ದಾಖಲಿಸಲಾಗುವುದೆಂದು ಎಚ್ಚರಿಕೆ ಕೂಡ ಈ ದೂರಿನಲ್ಲಿ ನೀಡಲಾಗಿದೆ.
ಈ ದೂರು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಚಂದ್ರಕಾAತ ಭಾರ್ದಿಕೆ, ಹಾಗೂ ಹಿಂದುತ್ವನಿಷ್ಠ ಕಾರ್ಯಕರ್ತರಾದ ಶ್ರೀ. ಪ್ರಭಾಕರ ಭೋಸಲೆ, ಪ್ರಸನ್ನ ದೇವರುಖಕರ , ಹಿತೇಂದ್ರ ಪಾಗಧರೆ, ರಾಹುಲ ಭಜಬಳ, ಅಶೋಕ್ ಸೋನಾವಣೆ, ಆಶಿಶ ಪಾಂಡೆಯ, ದಿನೇಶ ಖಾನವಿಲೇಕರ, ಸಾಗರ ಚೋಪದಾರ, ನ್ಯಾಯವಾದಿ ಸುರಭಿ ಸಾವಂತ ಮುಂತಾದ 27 ಜನರು ಸೇರಿ ನೀಡಿದ್ದಾರೆ. ಹೇಟ್ ಸ್ಪೀಚ್ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ ವಿ ನಾಗರಥನ ಇವರು ಏಪ್ರಿಲ್ 28.2023 ರಂದು ಸಮಾಜದಲ್ಲಿ ಯಾರೇ ದ್ವೇಷಪಸರಿಸುವ ಹೇಳಿಕೆ ನೀಡಿ ವಾದವಿವಾದ ನಿರ್ಮಾಣ ಮಾಡುವವರ ವಿರುದ್ಧ ಯಾರೋ ದೂರು ನೀಡುವರೆಂದು ದಾರಿ ನೋಡುತ್ತಾ ಕೂರುವ ಬದಲು ಸರಕಾರ ಸ್ವತಃ ದೂರು ದಾಖಲಿಸಬಹುದು ಎಂದು ಆದೇಶ ನೀಡಿದೆ. ಹೀಗೆ ಮಾಡಲು ವಿಳಂಬವಾದರೆ ಆಗ ಇದನ್ನು ಸರ್ವೋಚ್ಚ ನ್ಯಾಯಾಲಯದ ಅವಮಾನ ಎಂದು ತಿಳಿಯಲಾಗುವುದೆಂದು ಕೂಡ ಅದು ಹೇಳಿದೆ.