Friday, January 24, 2025
ಕ್ರೈಮ್ದಕ್ಷಿಣ ಕನ್ನಡಬೆಂಗಳೂರುಸುದ್ದಿ

ಮಹೇಶ್ ಶೆಟ್ಟಿ ತಿಮರೋಡಿ ಆಂಡ್ ಗ್ಯಾಂಗ್ ಗೆ ಮುಳುವಾಗುತ್ತಾ ನಿರಂತರ ನ್ಯಾಯಾಂಗ ನಿಂದನೆ, ಕಾನೂನು ಉಲ್ಲಂಘನೆಯ ಭಾಷಣ..!? ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಮತ್ತೊಂದು ಆರ್ಜಿ ಸಲ್ಲಿಕೆ – ಕಹಳೆ ನ್ಯೂಸ್

ಬೆಂಗಳೂರು : ನ್ಯಾಯಾಲಯದ ಆದೇಶದ ಉಲ್ಲಂಘಿಸಿ, ನಿರಂತರ ನ್ಯಾಯಲಯದ ತೀರ್ಪಿನ ವಿರುದ್ಧ ಭಾಷಣ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಆಂಡ್ ಗ್ಯಾಂಗ್ ಗೆ ಹೈಕೋರ್ಟ್ ಹಾಗೂ ಸಿಟಿ ಸಿವಿಲ್ ಕೋರ್ಟ್‌ ಈ ಮೊದಲೇ ಎಚ್ಚರಿಕೆ ನೀಡಿತ್ತು, ಆದರೆ, ಅದನ್ನೂ ಮೀರಿ ಭಾಷಣ ಮಾಡುತ್ತಿರುವ ತಿಮರೋಡಿ ಆಂಡ್ ಗ್ಯಾಂಗ್ ಗೆ ಇದೀಗ ಬಹುದೊಡ್ಡ ಸಂಕಷ್ಟ ಎದುರಾಗುವ ಸಾದ್ಯತೆ ದಟ್ಟವಾಗಿದೆ.

ಇಂದು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನ್ಯಾಯಾಂಗ ನಿಂದನೆ ಮಾಡುತ್ತಿರುವುದರ ವಿರುದ್ಧ ಕ್ರಮದ ಕುರಿತು ( ಡಿ.ಜಿ. ಹಾಗೂ ಐಜಿಪಿ ) ಉನ್ನತ ಪೋಲೀಸ್ ಅಧಿಕಾರಿಗಳಿಗೆ ಸೂಚನೆಗೆ ಅರ್ಜಿ ದಾಖಲಾಗಿದ್ದು, ಭಾರೀ ಸಂಕಷ್ಟ ಎದುರಾಗಿದೆ. ಅಕ್ಟೋಬರ್ 09 ರಂದು ಈ ಕುರಿತುಆಕ್ಷೇಪಣೆ ಸಲ್ಲಿಸಲು ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ವಿಠ್ಠಲ ಗೌಡ, ಸೋಮನಾಥ ನಾಯಕ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು, ಈ ಬಗ್ಗೆಯೂ ಉತ್ತರ ನೀಡುವಂತೆ ನ್ಯಾಯಲಯ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಖ್ಯಾತ ಹೈಕೋರ್ಟ್ ನ್ಯಾಯವಾದಿಗಳಾದ ರಾಜಶೇಖರ ಹಿಲ್ಯಾರ್ ಹಾಜರಾಗುದ್ದರು.